Select Page

Advertisement

ಭಿಕ್ಷುಕರಿಗೆ ಹಣ ಕೊಡುವುದು ನಿಲ್ಲಿಸಿ : ಈ ಅಭಿಯಾನದ ಬಗ್ಗೆ ನಿಮಗೆಷ್ಟು ಗೊತ್ತು…?

ಭಿಕ್ಷುಕರಿಗೆ ಹಣ ಕೊಡುವುದು ನಿಲ್ಲಿಸಿ : ಈ ಅಭಿಯಾನದ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು : ಭಿಕ್ಷಾಟನೆ ಹಾಗೂ ಮಾನವ ಕಳ್ಳ ಸಾಗಣೆ ಇವೆರಡು ಪ್ರಸ್ತುತ ಪಿಡುಗಾಗಿದ್ದು, ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ “ನಮ್ಮ ಬೆಂಗಳೂರು ಹುಡುಗರು” ತಂಡದ ಸದಸ್ಯರು ವಿನೂತನ ಹೋರಾಟ ಹಮ್ಮಿಕೊಂಡಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಜಾಗೃತಿ ಅಭಿಯಾನ

ಭಿಕ್ಷುಕರು ಎಂದ ತಕ್ಷಣವೇ ಜೇಬಿನಲ್ಲಿದ್ದ ಬಿಡಿಗಾಸು ತಗೆದು ತಟ್ಟೆಗೆ ಹಾಕುವ ಕೆಲಸ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಆ ಭಿಕ್ಷಾಟನೆ ಹಿಂದೆ ಎಂತಹ ಜಾಲ ಇದೇ. ಮತ್ತು ಮುಗ್ಧ ಮಹಿಳೆಯರನ್ನು ಹಾಗೂ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿ ಯಾವೆಲ್ಲ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಹಾಗೆ ಮಾನವ ಕಳ್ಳ ಸಾಗಣೆಯಿಂದ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬುದರ ಸ್ಪಷ್ಟ ಅರಿವು ಹೊಂದಿರುವ ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರಿಂದ ವಿನೂತನ ಅಭಿಯಾನ ಪ್ರಾರಂಭವಾಗಿದೆ.

ಭಿತ್ತಿ ಪತ್ರದ ಮೂಲಕ ಜಾಗೃತಿ

ಹೌದು ಸಾಮಾನ್ಯವಾಗಿ ಭಿಕ್ಷಾಟನೆ ಮಾಡುವ ಮಹಿಳೆಯರು ಹಾಗೂ ಮಕ್ಕಳ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಮಕ್ಕಳ‌ ಕೈಯಲ್ಲಿ ಪೆನ್ನು, ಪುಸ್ತಕ ಕೊಟ್ಟು ಮಾರಾಟ ಮಾಡುವ ಉದ್ದೇಶದಿಂದ ಹಿಂದೆ ಬೇರೆಯೊಂದು ದೃಷ್ಟಿಕೋನ ಅಡಗಿದೆ ಎನ್ನುತ್ತಾರೆ ಈ ಅಭಿಯಾನದ ರೂವಾರಿ ವಿನೋದ್. ‌ಇವರು ಹೇಳುವ ಪ್ರಕಾರ ಭಿಕ್ಷಾಟನೆ ನಿಷೇಧ ಕಾಯ್ದೆ 1975 ರ ಪ್ರಕಾರ ನಿರ್ಗತಿಕರಿಗೆ ಜೀವನ ನಡೆಸಲು ಸರ್ಕಾರದಿಂದ ಉದ್ಯೋಗ ತರಬೇತಿ ನೀಡಲಾಗುತ್ತದೆ. ಈ ಕುರಿತು ಅವರಿಗೆ ಸರಿಯಾದ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೇ ಎನ್ನುತ್ತಾರೆ.

ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರು

ಹಣ ನೀಡದಿದ್ದರೆ ಗ್ಯಾಂಗ್ ಒಡೆಯುತ್ತವೆ : ಭಿಕ್ಷಾಟನೆ ಮಾಡುವವರಿಗೆ ಅವಶ್ಯಕತೆ ಇದೆ ಎಂದಾದರೆ ಅವರಿಗೆ ಊಟ ನೀಡಿ. ಸಂಪೂರ್ಣವಾಗಿ ಎಲ್ಲೆಡೆ ಹಣ ಕೊಡುವುದನ್ನು ನಿಲ್ಲಿಸಿದಾಗ ಈ ಭಿಕ್ಷುಕರ ಹಿಂದಿರುವ ಗ್ಯಾಂಗ್ ಒಡೆಯಬಹುದು. ಇದರಿಂದ ಮಾನವ ಕಳ್ಳ ಸಾಗಣೆ ಹಾಗೂ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುವ ಹಿಂಸೆಯನ್ನು ತಪ್ಪಿಸಬಹುದು ಎಂಬುದು ಸಂಘದ ಸದಸ್ಯರಾದ ಸುಮತಿ ತಳವಾರ ಅಭಿಪ್ರಾಯ

ಕಳೆದ ಒಂಬತ್ತು ವಾರಗಳಿಂದ ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮತ್ತು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರ ಅಧಿಕೃತ ಒಪ್ಪಿಗೆಯನ್ನು ಪಡೆದಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಮತ್ತಿತರರು ಕೂಡ ಈ ವಿಚಾರಕ್ಕೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!