Select Page

ಸವದಿ ಮಹಾ ಮೋಸಗಾರ ; ಮತ್ತೆ ಹರಿಹಾಯ್ದ ಸಾಹುಕಾರ್

ಸವದಿ ಮಹಾ ಮೋಸಗಾರ ; ಮತ್ತೆ ಹರಿಹಾಯ್ದ ಸಾಹುಕಾರ್

ಅಥಣಿ : ಬಿಜೆಪಿಯಲ್ಲಿದ್ದು ಅನೇಕ ವರ್ಷ ಅಧಿಕಾರ ಅನುಭವಿಸಿ ಇಂದು ಅನೇಕ ಸುಳ್ಳುಗಳನ್ನು  ಹೇಳುವ ಲಕ್ಷ್ಮಣ ಸವದಿ  ಒಬ್ಬ ಮಹಾ ಮೋಸಗಾರ, ಆತನನ್ನು  ನಂಬಬೇಡಿ, ಈ ಚುನಾವಣೆಯಲ್ಲಿ ಆತನನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಗುಡುಗಿದರು.

ಅವರು ಅಥಣಿ ಪಟ್ಟಣದ  ಸಾಮಾಜಿಕ ಕಾರ್ಯಕರ್ತ, ಕನ್ನಡಪರ ಹೋರಾಟಗಾರ ರವಿ ಪೂಜಾರಿ, ಜೆಡಿಎಸ್ ಪಕ್ಷದ ಮುಖಂಡ ಗಿರೀಶ ಬುಟಾಳಿ  ಅವರನ್ನು  ಬಿಜೆಪಿಪಕ್ಷಕ್ಕೆ  ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಉಪಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಸ್ಪರ್ಧಿಸುವಾಗ ಪಕ್ಷದ ಹೈಕಮಾಂಡ್ ನಲ್ಲಿ  ವಲಸಿ ಬಂದ 17 ಜನರಿಗೂ  2023ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂಬುದು ಆವತ್ತೇ ಮಾತುಕತೆ ಆಗಿತ್ತು. ಆದರೆ ಲಕ್ಷ್ಮಣ ಸವದಿ  ಪಕ್ಷದ ನಾಯಕರು ನನಗೆ ಟಿಕೆಟ್ ನೀಡುತ್ತೇನೆ ಎಂದು  ಮೋಸ ಮಾಡಿದ್ದಾರೆ  ಎಂದು ಸುಳ್ಳು ಹೇಳುತ್ತಿದ್ದಾನೆ. ನಿಜವಾಗಲೂ  ಲಕ್ಷ್ಮಣ ಸವದಿ ಅವರಿಂದ  ನನಗೂ ಮತ್ತು ಮಹೇಶ್ ಕುಮಟಳ್ಳಿಗೆ ಮೋಸವಾಗಿದೆ. ಅನೇಕ ವರ್ಷ ಅಧಿಕಾರ ಅನುಭವಿಸಿದ ಬಿಜೆಪಿ ಪಕ್ಷಕ್ಕೂ ಮೋಸ ಮಾಡಿದ್ದಾನೆ.

ಇವರಿಂದ ಅನೇಕ ರಾಜಕೀಯ ನಾಯಕರಿಗೆ ಮೋಸವಾಗಿದೆ. ಬಿ.ಎಲ್  ಪಾಟೀಲ್ , ಲೀಲಾವತಿ ದೇವಿ ಆರ್, ಪ್ರಸಾದ್,  ದಿ. ಉಮೇಶ ಕತ್ತಿ ಅವರಿಗೂ ಸವದಿ ಮೋಸ ಮಾಡಿದ್ದಾನೆ. ಅಲ್ಲದೆ  ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹ ಮೋಸ ಮಾಡಿದ್ದಾನೆ ಎಂದು ಲಕ್ಷ್ಮಣ ಸವದಿ ವಿರುದ್ಧ ರಮೇಶ ಜಾರಕಿಹೊಳಿ ಹರಿಹಾಯ್ದರು.    ಈ ಚುನಾವಣೆಯಲ್ಲಿ ಸವದಿ ಎಷ್ಟೇ ಖರ್ಚು ಮಾಡಿದರೂ ನೀವು ಮಾತ್ರ ಅವನಿಗೆ ತಕ್ಕ ಉತ್ತರ ನೀಡಬೇಕು. ನಾನು ಈ ವಾರದಲ್ಲಿ 5ನೇ ಸಲ ಅಥಣಿಗೆ ಭೇಟಿ ನೀಡುತ್ತಿದ್ದೇನೆ. ಸೊಕ್ಕಿನ ಮನುಷ್ಯ ಸೋಲು ಕಾಣಬೇಕು,  ಉದ್ದ ಅಂಗಿ ಇದ್ದಿದ್ದು ಗಿಡ್ಡ ಅಂಗಿ ಆಗಬೇಕು. 

2018 ರಿಂದ ಇವನು ಎಲ್ಲಾ ಕಡೆ ಕೈ ಆಡಿಸುತ್ತಿದ್ದಾನೆ. ನಾವು ಗಟ್ಟಿಯಾಗಿ ನಿಂತಿದ್ದೇವೆ. ಬಿಜೆಪಿ ಪಕ್ಷ ಎಂದರೆ ತಾಯಿ ಸಮಾನ ಎನ್ನುತ್ತಿದ್ದ ಸವದಿ ಇಂದು ಮೋಸ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾನೆ. ನಮ್ಮ ಪಕ್ಷದ ಮೇಲಿನ ಪೀಡೆ ಹೋಗಿ ಈಗ ಸ್ವಚ್ಛವಾಗಿದೆ ಸವದಿ ವಿರುದ್ಧ ಏಕವಚನದಲ್ಲಿಯೇ ಗುಡುಗಿದರು. 

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಇಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಮುಖಂಡರನ್ನು  ಹಾಗೂ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ತಾವೆಲ್ಲರೂ ಒಗ್ಗಟ್ಟಿನಿಂದ ಪ್ರತಿ ವಾರ್ಡು ಮತ್ತು ಬೂತ್ ಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ ಮತ್ತು ಮಹೇಶ ಕುಮಟಳ್ಳಿ ಅವರು ಮತಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನ ಮನೆ ಮನಗಳಿಗೆ ಮನವರಿಕೆ ಮಾಡುವ ಮೂಲಕ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು. ಅವರ ಗೆದ್ದ ನಂತರ  ಇನ್ನುಳಿದ ಎಲ್ಲಾ ಕಾಮಗಾರಿಗಳನ್ನು ಮತ್ತು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ  ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ತಾಲೂಕಿನ ಅನೇಕ ಪಿಕೆಪಿಎಸ್  ಸೊಸೈಟಿಗಳಲ್ಲಿ ತುಂಬಾ ಅವ್ಯವಹಾರ ಆಗಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ  ತನಿಖೆ ಮಾಡಿಸುತ್ತೇವೆ. ಅವ್ಯವಹಾರ ಕಂಡು ಬಂದ  ಸೊಸೈಟಿಗಳನ್ನು ಸೂಪರ್ ಸೀಡ್  ಮಾಡಿ  ಮತ್ತೆ ಚುನಾವಣೆ ಚುನಾವಣೆ ನಡೆಸುತ್ತೇವೆ.

ಲಕ್ಷ್ಮಣ ಸವದಿಯನ್ನು ಡಿಸಿಸಿ ಬ್ಯಾಂಕ್ ಆಯ್ಕೆ ಸಂದರ್ಭ ನಾವು ಅವನನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ .ಇದರಿಂದಾಗಿ ಎಲ್ಲಾ ಸಹಕಾರಿ ಸಂಘಗಳಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂದು ಜಾರಕಿಹೊಳಿ ಆರೋಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!