ಮೂಡಲಗಿ : 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ 624 ಅಂಕ ಪಡೆದ ಚೈತನ್ಯ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ‌ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

 ವಿವೇಕ್ ಸುಳ್ಳನ್ನವರ  ಮರುಮೌಲ್ಯಮಾಪನದಲ್ಲಿ ಒಂದು ಅಂಕ ಪಡೆಯುವ ಮೂಲಕ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಇದೆ ಶಾಲೆಯ  ಸೌಮ್ಯ ಸಿದ್ದಪ್ಪ ಪೂಜಾರಿ ವಿದ್ಯಾರ್ಥಿನಿಯ 619 ಅಂಕಗಳು ಮರು ಮೌಲ್ಯಮಾಪನದಲ್ಲಿ ಮೂರು ಅಂಕ ಪಡೆಯುವ ಮೂಲಕ  625 ಕ್ಕೆ 622 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ   ಸ್ಥಾನ ಪಡೆದಿದ್ದಾಳೆ.



ಸಾಧನೆ ಗೈದ  ವಿದ್ಯಾರ್ಥಿಗಳನ್ನು ಬೆಮುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಇಒ ಪ್ರಕಾಶ ಹಿರೇಮಠ  ಹಾಗೂ ಶಾಲೆಯ ಆಡಳಿತ ಮಂಡಳಿಯವರಿಗೆ ಹಾಗೂ ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದರು.