Select Page

Advertisement

ರೇಣಕಾ ದೇವಿ ಜಾತ್ರೆಯಲ್ಲಿ ಪವಾಡ- ಸುಡು ಸುಡು ಹುಗ್ಗಿಯಲ್ಲಿ ಕೈ ಎದ್ದಿದ ಸ್ವಾಮೀಜಿ

ರೇಣಕಾ ದೇವಿ ಜಾತ್ರೆಯಲ್ಲಿ ಪವಾಡ- ಸುಡು ಸುಡು ಹುಗ್ಗಿಯಲ್ಲಿ ಕೈ ಎದ್ದಿದ ಸ್ವಾಮೀಜಿ

ಚಿಕ್ಕೋಡಿ: ಭಾರತ ಹುಣ್ಣೆಮೆ ದಿನವಾದ ಇಂದು ನಾಡಿನ ಎಲ್ಲೆಡೆ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆದವು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿಯೂ ಭಾರತ ಹುಣ್ಣೆಮೆ ದಿನದಂದು ಪವಾಡವೊಂದು ಜರುಗಿತು.
ಹೌದು, ಸ್ವಾಮೀಜಿಯೋರ್ವರು ಸುಡು ಸುಡು ಹುಗ್ಗಿಯಲ್ಲಿ ಕೈ ಎದ್ದಿ ಪ್ರಸಾದ ತೆಗೆದರು. ಈ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾಗಿದ್ದು ರಾಯಭಾಗ ತಾಲೂಕಿನ ಬಾವನ ಸೌದತ್ತಿ ಗ್ರಾಮ. ಬಾವನ ಸೌದತ್ತಿ ಗ್ರಾಮದಲ್ಲಿ ಭಾರತ ಹುಣ್ಣೆಮೆ ದಿನದಂದು ಗ್ರಾಮ ದೇವತೆ ರೇಣುಕಾ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಮಹಾಮಾರಿ ಕೋವಿಡ್ -19 ಸೋಂಕಿನ ಕಾರಣವಾಗಿ ಜಾತ್ರಾ ಮಹೋತ್ಸವ ಸರಳವಾಗಿ ನೆರವೇರಿದರೂ, ಜಾತ್ರೆಯ ನಿಮಿತ್ತ ನಡೆಯಬೇಕಾಗಿದ್ದ ಎಲ್ಲ ಪೂಜೆ,ಧಾರ್ಮಿಕ ವಿಧಿ ವಿಧಾನ ಹಾಗೂ ಅನ್ನ ಪ್ರಸಾದ ಸಾಂಗವಾಗಿ ಜರುಗಿದವು.

ಜಾತ್ರೆಯ ನಿಮಿತ್ತ ರೇಣುಕಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಎಂದಿನಂತೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ಅನ್ನ ಹಾಗೂ ಸಾಂಬಾರ್ ಪ್ರಸಾದ ರೂಪದಲ್ಲಿ ಭಕ್ತರಿಗೆ ಉಣಬಡಿಸಲಾಯಿತು. ಅನ್ನ ಪ್ರಸಾದಕ್ಕೆ ಓಂಕಾರ ಆಶ್ರಮದ ಶಿವಶಂಕರ್ ಸ್ವಾಮೀಜಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂದು ಬೆಳಿಗ್ಗೆಯಿಂದ ಸಿದ್ಧಪಡಿಸಲಾದ ಪ್ರಸಾದದ ಪಾತ್ರೆಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ಕೊಪ್ಪರಿಗೆಯಲ್ಲಿ ಸಿದ್ಧಪಡಿಸಲಾದ ಹುಗ್ಗಿಗೆ ಕೈ ಹಾಕಿದ ಸ್ವಾಮೀಜಿಯವರು ಐದು ಬೊಗಸೆ ಸುಡು ಸುಡು ಹುಗ್ಗಿಯನ್ನು ದೇವಿಯ ನೈವೇದ್ಯಕ್ಕೆ ತೆಗೆದಿರಿಸಿದರು. ಅದೇ ರೀತಿ ಅನ್ನದ ಬುಟ್ಟಿಯಿಂದಲೂ ಬೊಗಸೆಯಿಂದ ನೈವೇದ್ಯಕ್ಕೆ ತೆಗೆಯಲಾಯಿತು. ಪ್ರಸಾದಕ್ಕೆ ಸಿದ್ಧಪಡಿಸಲಾದ ಅನ್ನ ಹಾಗೂ ಹುಗ್ಗಿಯೂ ಸುಡುತ್ತಿದ್ದರೂ ಸ್ವಾಮೀಜಿಯವರು ಕರವ ಎದ್ದಿ ನೈವೇದ್ಯಕ್ಕೆ ಹುಗ್ಗಿ ತೆಗೆದಿರುವುದು ಪವಾಡವೇ ಸರಿ ಎನ್ನುವುದು ಅಲ್ಲಿಯ ಜನರ ಬಾಯಲ್ಲಿ ಹೊರಡುತ್ತಿತ್ತು. ಈ ಒಂದು ಧಾರ್ಮಿಕ ಕಾರ್ಯಕ್ಕೆ ಗ್ರಾಮದ ನೂರಾರು ಜನರು ಸಾಕ್ಷಿಯಾದರು. ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿಯವರು ಅನ್ನ ಪ್ರಸಾದಕ್ಕೆ ಚಾಲನೆ ನೀಡಿದ ಬಳಿಕ ಎಲ್ಲ ಭಕ್ತರು ಪ್ರಸಾದ ಸೇವಿಸಿದರು.
ಇನ್ನು ಪ್ರತಿ ವರ್ಷ ಬಾವನ ಸೌದತ್ತಿ ಗ್ರಾಮದಲ್ಲಿ ಗ್ರಾಮ ದೇವತಿ ರೇಣುಕಾದೇವಿಯ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತದೆ. ಜಾತ್ರೆಯ ದಿನದಂದು ಬಾವನ ಸೌದತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು, ಹಣ್ಣು-ಕಾಯಿ ಮಾಡಿಸಿ ಪುನೀತರಾಗುತ್ತಾರೆ.

Advertisement

Leave a reply

Your email address will not be published. Required fields are marked *

error: Content is protected !!