60 ಬಸ್ ಮಾಲಿಕ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ..?
ಮಂಗಳೂರು : ಕರಾವಳಿ ಭಾಗದ ಹೆಸರಾಂತ ಉದ್ಯಮಿ ಮಹೇಶ್ ಬಸ್ ಟ್ರ್ಯಾವಲ್ಸ್ ( Mahesh bus Travel ) ಮಾಲಿಕ ಪ್ರಕಾಶ್ ಶೇಖ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾರಿ ಹಾಗೂ ಬಸ್ ಟ್ರ್ಯಾವಲ್ಸ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಪ್ರಕಾಶ್ ಸಾವು ಅನೇಕರಿಗೆ ನೋವು ತರಿಸಿದೆ.
ಹೌದು ಸುಮಾರು 60 ಬಸ್ ಮಾಲಿಕರಾದ ಪ್ರಕಾಶ್ ಶೇಖ ಅವರ ಟ್ರ್ಯಾವಲ್ಸ್ ಬೆಳೆದು ಬಂದ ರೀತಿ ಅದ್ಬುತವಾಗಿದೆ. ಇವರ ತಂದೆ ಜಯರಾಮ ಶೇಖ ಕೇವಲ ಮೂರು ಬಸ್ ನಿಂದ ಪ್ರಾರಂಭಿಸಿದ್ದ ಮಹೇಶ್ ಬಸ್ ಟ್ರ್ಯಾವಲ್ಸ್ ಇಂದು ಬರೋಬ್ಬರಿ 60 ಬಸ್ ಸೇರಿದಂತೆ ಲಾರಿ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಫ್ಲ್ಯಾಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ರವಿವಾರ ಬೆಳಗ್ಗೆ ತನ್ನ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದ ಇವರು ಕೆಲಸಗಾರರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಇದೇ ಕಾರಣಕ್ಕಾಗಿ ಪ್ರಕಾಶ್ ಮೇಲೆ ಕೆಲಸಗಾರರು ಉತ್ತಮ ಒಡನಾಟ ಹೊಂದಿದ್ದರು. ಸಧ್ಯ ಇವರನ್ಯ ಕಳೆದುಕೊಂಡು ಮಹೇಶ್ ಬಸ್ ಸಂಸ್ಥೆ ನೋವಿನಲ್ಲಿ ಮುಳಿಗಿದೆ.
ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಏನು ಕಾರಣ ಎಂಬ ಪ್ರಶ್ನೆ ಎಲ್ಲೆಡೆ ಮೂಡಿದೆ. ಆದರೆ ಕೆಲವು ವರದಿಗಳ ಪ್ರಕಾರ ಪೊಲೀಸರು ಈ ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತದೆ.
ಇನ್ನೂ ಕುಟುಂಬದವರು ಈ ಸಾವಿನ ಕುರಿತು ಮಾಹಿತಿ ನೀಡಬೇಕು ಅಷ್ಟೇ. ಆದರೆ ಕೆಲವು ಗೆಳಯರು ಹೇಳುವಂತೆ ಉವಿತ ಬಸ್ ಯೋಜನೆ ನಂತರದಲ್ಲಿ ಏನಾದರು ಇವರ ಟ್ರ್ಯಾವಲ್ ಬ್ಯುಸಿನೆಸ್ ಗೆ ಹೊಡೆತ ನೀಡಿರಬಹುದಾ ಎಂಬ ಮಾತು ಕೇಳಿಬರುತ್ತಿದ್ದು ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬರಬೇಕಿದೆ.