Select Page

ನನ್ನ ಗಂಡನನ್ನು ವಿಲನ್ ರೀತಿ ಚಾನಲ್ ಅವರು ತೋರಿಸ್ತಾ ಇದ್ದಾರೆ….ವಿನಯ್ ಪತ್ನಿ ಕಣ್ಣೀರು

ನನ್ನ ಗಂಡನನ್ನು ವಿಲನ್ ರೀತಿ ಚಾನಲ್ ಅವರು ತೋರಿಸ್ತಾ ಇದ್ದಾರೆ….ವಿನಯ್ ಪತ್ನಿ ಕಣ್ಣೀರು

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಜನ್ 10 ರಲ್ಲಿ ಸಧ್ಯ ಸ್ಪರ್ಧಾಳುಗಳು ತಮ್ಮ ಆಟ ನಡೆಸಿದ್ದು ಇದರಲ್ಲಿ ಕಿರುತೆರೆ ನಟ ವಿನಯ್ ಕುರಿತು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ವಿನಯ್ ( vinay gowda )ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿದ್ದು ನನ್ನ ಗಂಡ ತುಂಬಾ ಒಳ್ಳೆಯವರು, ಹೆಣ್ಣುಮಕ್ಕಳನ್ನು ಗೌರವಿಸುತ್ತಾರೆ. ಆದರೆ ಚಾನಲ್ ಮವರು ನನ್ನ ಗಂಡನನ್ನು ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ಈ ಕುರಿತು ಕಲರ್ಸ್ ಕನ್ನಡಕ್ಕೆ ಕರೆ ಮಾಡಿದರೆ ಅಲ್ಲಿನ ಸಿಬ್ಬಂದಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ಗೌರವ ನೀಡುವ ನನ್ನ ಗಂಡನನ್ನು ಕೆಟ್ಟದಾಗಿ ತೋರಿಸುವ ಪ್ರಯತ್ನ ಮಡೆದಿದೆ ಎಂದು ಅವರು ಹೇಳಿದ್ದಾರೆ. Bigg boss Kannada – 10

ಪ್ರತಿ ದಿನ ವಿನಯ್ ಅವರ ಬಗ್ಗೆ ಏನು ತೋರಿಸುತ್ತಾರೆ ಎಂಬುದು ನಮಗೆ ಭಯ ಮೂಡಿಸುತ್ತಿದೆ. ಇದರಿಂದ ನಮಗೆ ತುಂಬಾ ನೋವು ಉಂಟಾಗಿದೆ. ಜನರೇ ಆನೆ ಎಂದು ಹೇಳಿದ್ದಾರೆ. ಆದರೆ ಅದೇ ವಿನಯ್ ಅವರಿಗೆ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. Sudeep

ನಾನು ಹೊರಗಡೆ ಒಂದು ಕಂಪನಿ ನಡೆಸುತ್ತೇನೆ ಎಂಬ ಡ್ರೋಣ್ ಪ್ರತಾಪ್ ಅವರು ಹೇಳಿದ್ದಾಗ ನನ್ನದು ಹೊರಗೆ 34 ಕಂಪನಿ ಇದೆ ಎಂದ ವಿನಯ್ ಅವರ ಮಾತು ಬೇರೆ ಇತ್ತು. ಆದರೆ ಅದನ್ನು ಕಟ್ ಮಾಡಿ ತೋರಿಸಲಾಗಿದೆ ಎಂದು ನೊಂದುಕೊಂಡರು.

ವಿನಯ್ ಅತ್ಯಂತ ಶ್ರಮವಹಿಸಿ ಬದುಕು ನಡೆಸಿದವರು. ಅವರು ಎಲ್ಲರಿಗೂ ಮರ್ಯಾದೆ ಕೊಡುವ ವ್ಯಕ್ತಿ. ‌ಆದರೆ ಕೆಲವರು ನನ್ನ ಗಂಡನ ಕೆಲ ವಿಷಯ ಎತ್ತಿಕೊಂಡು ನನಗೆ ಕರೆ ಮಾಡಿ ಭಯ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *