
ತಾಲಿಬಾನ್ ಮನಸ್ಥಿತಿಗೆ ಹನುಮಂತನ ಗದೆಯಿಂದ ಉತ್ತರ ; ಯೋಗಿ ಆದಿತ್ಯನಾಥ ಎಚ್ಚರಿಕೆ ಯಾರಿಗೆ

ಜೈಪುರ : ಸದಾ ವಿರೋಧಿಗಳ ಪಾಲಿಗೆ ಸಿಂಹ ಸ್ವಪ್ನ ವಾಗಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ಉಗ್ರವಾದಿ ಮನಸ್ಥಿತಿಯವರಿಗೆ ಎಚ್ಚರಿಕೆ ನೀಡಿದ್ದಾರೆ. ( Yogi adityanath )
ರಾಜಸ್ಥಾನದ ತಿಜಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷ ಹಮಾಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದು ಇದು ತಾಲಿಬಾನ್ ಮನಸ್ಥಿತಿ ಹೊಂದಿದ್ದಾರೆ. ಆದರೆ ತಾಲಿಬಾನ್ ಮನಸ್ಥಿತಿಯವರಿಗೆ ಹನುಮಂತನ ಗದೆ ಉತ್ತರ ನೀಡಲಿದೆ ಎಂದು ಯೋಗಿ ಬಾಬಾ ಗುಡುಗಿದ್ದಾರೆ.
ನೀವು ತಾಲಿಬಾನ್ ಮಸ್ಥಿತಿಯನ್ನು ಯಾವ ರೀತಿಯ ಗಾಜಾದಲ್ಲಿ ಪುಡಿ ಮಾಡಲಾಗಿದೆ ಅನ್ನೋದನ್ನು ನೋಡಿರುತ್ತೀರಿ. ಗುರಿಯಿಟ್ಟು ತಾಲಿಬಾನ್ ಮನಸ್ಥಿತಿಯನ್ನು ಇಸ್ರೇಲ್ ನಾಶ ಮಾಡುತ್ತಿದೆ.
ಭಾರತದಲ್ಲಿ ತಾಲಿಬಾನ್ ಮನಸ್ಥಿತಿಯನ್ನು ನಾಶ ಮಾಡಲು ಹನುಮಂತನ ಗದೆ ಉತ್ತರ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.