Select Page

ಜಮೀರ್ ಅಹಮ್ಮದ್ ಸ್ಪೋಟಕ ಆಡಿಯೋ ವೈರಲ್ ; ಸಚಿವಸ್ಥಾನ ಸಿಗುವುದು ಡೌಟ್…!

ಜಮೀರ್ ಅಹಮ್ಮದ್ ಸ್ಪೋಟಕ ಆಡಿಯೋ ವೈರಲ್ ; ಸಚಿವಸ್ಥಾನ ಸಿಗುವುದು ಡೌಟ್…!




ಬೆಂಗಳೂರು : ಇನ್ನೇನು ಡಿಕೆಶಿ ಸರ್ಕಾರದಲ್ಲಿ ಸಚಿವಸ್ಥಾನ ಫಿಕ್ಸ್ ಎಂದು ಹೇಳಲಾಗುತ್ತಿದ್ದ ಸಚಿವ ಜಮೀರ್ ಅಹಮ್ಮದ್ ಕೊನೆ ಕ್ಷಣದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಕುರಿತು ಆಡಿಯೋ ಹೊರಬಿದ್ದಿದೆ.

ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ ಎಂದು ಜಮೀರ್ ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಜಮೀರ್‌ ಅಹ್ಮದ್‌ ಖಾನ್‌ರದ್ದು ಎನ್ನಲಾದ ಆಡಿಯೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಬದಲಾಗಿ ಮುಸ್ಲಿಮರೆಲ್ಲಾ ಪಕ್ಷೇತರರಿಗೆ ವೋಟ್‌ ಹಾಕಬೇಕು ಎಂದು ಆಗ್ರಹಿಸುವುದು ತಿಳಿದು ಬಂದಿದೆ. ಒಂದು ವೇಳೆ ಮುಸ್ಲಿಮರು ವೋಟ್‌ ಹಾಕಿಲ್ಲ ಅಂದ್ರೂ ಓಕೆ, ಅವನಿಗೆ ಕಾಂಗ್ರೆಸ್‌ ವೋಟ್‌ಗಳು ಮೈನಸ್‌ ಆಗಬೇಕು ಎಂದು ತಮ್ಮ ಬಂಟನಿಗೆ ಜಮೀರ್ ಸೂಚನೆ ನೀಡಿರುವುದು ಆಡಿಯೋದಲ್ಲಿದೆ.

ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಜಾಸ್ತಿ ಓಟ್ ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್ ನಲ್ಲಿ ಕಾಂಗ್ರೆಸ್ ಗೆ ಓಟ್ ಕಡಿಮೆ ಬರುವಂತೆ ನೋಡಿಕೊಳ್ಳಿ. ಜಾಸ್ತಿ ಹಾಕದೇ ಇರುವಂತೆ ನೋಡಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ಓಟ್ ಹಾಕಿಸೇಡಿ ಎಂದು ಆಡಿಯೋದಲ್ಲಿದೆ.

Advertisement

Leave a reply

Your email address will not be published. Required fields are marked *

error: Content is protected !!