Select Page

Advertisement

Video : ಸಿಟಿ ರವಿ ಪೋಸ್ಟರ್ ಹರಿದ ಕಾಂಗ್ರೆಸ್ ಯುವತಿ : ದಾವಣಗೆರೆಯಲ್ಲಿ ನೋಡ್ಕೊಳ್ತೇವೆ ಎಂದ ಬಿಜೆಪಿಗರು

Video : ಸಿಟಿ ರವಿ ಪೋಸ್ಟರ್ ಹರಿದ ಕಾಂಗ್ರೆಸ್ ಯುವತಿ : ದಾವಣಗೆರೆಯಲ್ಲಿ ನೋಡ್ಕೊಳ್ತೇವೆ ಎಂದ ಬಿಜೆಪಿಗರು

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ಹಾಕಲಾಗಿದ್ದ ಬ್ಯನಾರ್ ಅನ್ನು ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ಎಂಬುವವರು ಹರಿದು ಹಾಕಿದ್ದಾರೆ. ( BJP )

ಹೌದು ಇಂದು ಬೆಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಹುಟ್ಟು ಹಬ್ಬದ ನಿಮಿತ್ತವಾಗಿ ಸಿ.ಟಿ ರವಿ ಅವರ ಅಭಿಮಾನಿಗಳು ಬ್ಯಾನರ್ ಅವಳವಡಿಸಿದ್ದರು. ಈ ಸಂದರ್ಭದಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತೇ ಬಿಂದು ಗೌಡ ಹರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ ವಿಧಾನಸೌಧದ ಮುಂದೆ ಬ್ಯಾನರ್ ಅಳವಡಿಸಿದ್ದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ( CT RAVI )

ಇನ್ನೂ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಹಿಂಬಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ಧಾಮೋತ್ಸವ ಕಾರ್ಯಕ್ರಮದಲ್ಲಿ ಹಾಕಲಾಗುವ ಕಾಂಗ್ರೆಸ್ ಬ್ಯಾನರ್ ಗಳನ್ನು ನಾವು ಇದೇ ರೀತಿಯಲ್ಲಿ ಹರಿದು ಹಾಕುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಸಧ್ಯ ಈ ಬ್ಯಾನರ್ ವಿಷಯದ ಕುರಿತು ಚರ್ಚೆ ನಡೆಯುತ್ತಿದೆ. ( Bindu gowda )

Advertisement

Leave a reply

Your email address will not be published. Required fields are marked *