ನಾಳೆ ಬೆಳಗಾವಿಗೆ ಬರ್ತಾರಾ..? ಕಾಂಗ್ರೆಸ್ ಯುವ ನಾಯಕಿ : ಅಶ್ಲೀಲ ವೀಡಿಯೋ ಕುರಿತು ಸ್ಪಷ್ಟನೆ ನೀಡುವರಾ..?
ಬೆಳಗಾವಿ : ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕಾಂಗ್ರೆಸ್ ಯುವ ನಾಯಕಿಯದು ಎಮ್ನಲಾದ ಅಶ್ಲೀಲ ವೀಡಿಯೋದ ಕುರಿತು ನಾಳೆ ಬೆಳಗಾವಿಗೆ ಬರುತ್ತಿರುವ ಯುವತಿ ಸ್ಪಷ್ಟನೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಹೌದು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ. ಕಾಂಗ್ರೆಸ್ ಯುವ ನಾಯಕಿ, ಸಮಾಜಸೇವಕಿ, ಬಡವರ ಬಂಧು ಎಂಬ ಮುಂತಾದ ಹೆಸರಿನಿಂದ ಕರೆದುಕೊಳ್ಣುವ ಈ ಯುವತಿಯ ಅಶ್ಲೀಲ ಭಂಗಿಯ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತಾಗಿ ಯುವತಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಆದರೆ ನಾಳೆ ಬೆಳಗಾವಿಗೆ ಬರುತ್ತಾರೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಸ್ಪಷ್ಟನೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಬೆಳಗಾವಿ ನಂಟು : ಈ ಯುವತಿ ಕುರಿತು ಮಾಹಿತಿ ಕಲೆ ಹಾಕಿದ್ದಾಗ, ಬೆಳಗಾವಿಯ ಪ್ರತಿಷ್ಠಿತ ದೇವಸ್ಥಾನ ಒಂದರ ಟ್ರಸ್ಟ್ ಸದಸ್ಯೆ ಕೂಡಾ ಇದ್ದಾರೆ. ಜೊತೆಗೆ ಯುವತಿ ಅಶ್ಲೀಲ ವೀಡಿಯೋ ಹೊರಬರುತ್ತಿದ್ದಂತೆ ಟ್ರಸ್ಟ್ ನಿಂದ ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆದರೆ ಈ ಪ್ರಕರಣ ಇಷ್ಟಕ್ಕೆ ಮುಗಿದಿಲ್ಲ. ಕಳೆದ ಮೂರು ತಿಂಗಳ ಹಿಂದೆ ಹನಿಟ್ರ್ಯಾಪ್ ಆರೋಪದಡಿ ಈ ಯುವತಿ ಬೆಳಗಾವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆ ವ್ಯಕ್ತಿ ಬೆಳಗಾವಿ ಮೂಲದ ಸರ್ಕಾರಿ ನೌಕರ. ವ್ಯಕ್ತಿಯ ಜೊತೆಗಿನ ಅಶ್ಲೀಲ ವೀಡಿಯೋ ಇಟ್ಟುಕೊಂಡು ಯುವತಿ ಹೆದರಿಸಿದ್ದಾಳೆ ಎಂಬ ಮಾತು ಕೇಳಿಬಂದಿದ್ದರು, ಈ ಪ್ರಕರಣ ಯಾವ ಕಾರಣಕ್ಕೆ ಮುಚ್ಚಿ ಹೋಗಿದೆ ಎಂಬುದಂತು ಇನ್ನೂ ಅಸ್ಪಷ್ಟ.
ಮುಖವಾಡ ಕಳಚಿದ್ದ ಬೆಳಗಾವಿ ವಾಯ್ಸ್ :
ಕಾಂಗ್ರೆಸ್ ಯುವ ನಾಯಕಿಯಾದ ಇವಳು ಮಾಡುವುದು ಮಾತ್ರ ಕೆಳಮಟ್ಟದ ಕೆಲಸ. ಈ ಯುವತಿ ಬೆಳಗಾವಿ ಮೂಲದ ಸರ್ಕಾರಿ ನೌಕರನನ್ನೂ ಹನಿಟ್ರ್ಯಾಪ್ ಬಲಿಗೆ ಬೀಳಿಸಿ ಹಣ ಹೊಡೆಹಲು ಯತ್ನಿಸಿದವಳ ಮುಖವಾಡ ಬಯಲಾಗಿದೆ.
ಹೌದು ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಈ ಯುವತಿಯ ಅಶ್ಲೀಲ ವೀಡಿಯೋಗಳು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈಕೆ ಸಮಾಜಸೇವೆ ಹೆಸರಿನಲ್ಲಿ ನಡೆಸುತ್ತಿದ್ದ ಅನೇಕ ಅನಾಚಾರಗಳು ಸಧ್ಯ ಹೊರಬಿದ್ದಿವೆ. ರಾಜಕೀಯ ನಾಯಕರನ್ನು ಹಾಗೂ ಅಧಿಕಾರಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಈಕೆ ನಂತರ ಹಣ ವಸೂಲಿ ಮಾಡುವ ಕೆಲಸ ನಡೆಸುತ್ತಿದ್ದಳು.
ಈ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದಳು. ಜೊತೆಗೆ ತನ್ನದೇ ಹೆಸರಿನ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿ ಸಮಾಜಸೇವೆ ನಾಟಕ ಮಾಡುತ್ತಿದ್ದಳು. ಈ ಯುವತಿಯ ಅನಾಚಾರ ಕುರಿತು ಪತ್ರಿಕಾ ವರದಿ ಕೂಡಾ ಬಂದಿದೆ.