ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ವಿರುದ್ಧ ದಾಖಲಾಯ್ತು ಕೇಸ್…!
ಬೆಳಗಾವಿ : ಅಶ್ಲೀಲ ವೀಡಿಯೋದಲ್ಲಿ ಇದ್ದಾಳೆ ಎನ್ನಲಾದ ಕಾಂಗ್ರೆಸ್ ಯುವ ನಾಯಕಿ ಹಾಗೂ ಚನ್ನಪಟ್ಟಣ ಮೂಲದ ಯುವತಿ ವಿರುದ್ಧ ಬೆಳಗಾವಿ ಎ ಪಿ ಎಮ್ ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಗೆ ಮಾನಸಿಕ ಚಿತ್ರಹಿಂಸೆ, ಸುಳ್ಳು ಕೇಸ್ ನೀಡಿ ಮಾನನಷ್ಟ ಮಾಡಿ ಜೈಲಿಗೆ ಕಳುಹಿಸುವುದಾಗಿ ಜಾಗೂ ಜೀವ ಬೆದರಿಕೆ ಹಾಕುತ್ತಿರುವುದಾಗಿ ಬೆಳಗಾವಿಯ
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಎಂಬುವವರು ದೂರು ದಾಖಲಾಗಿದೆ. ಕಾಂಗ್ರೆಸ್ ಮುಖಂಡೆ ಚನ್ನಪಟ್ಟಣದ ಮೂಲದ ನವ್ಯಶ್ರೀ ರಾಮಚಂದ್ರರಾವ್ ಹಾಗೂ ಆಪ್ತ ತಿಲಕ್ ಸೇರಿ ಇಬ್ಬರ ಮೇಲೆ ಕೇಸ್ ದಾಖಲಾಗಿದೆ.
ನವ್ಯಶ್ರೀ ಆರ್. ಮೇಲೆ ಸೆಕ್ಷನ್ 384, 448, 504, 506, 34ಅಡಿಯಲ್ಲಿ ಸೋಮವಾರ ತಡರಾತ್ರಿ ಕೇಸ್ ದಾಖಲಾಗಿದೆ. ಒಟ್ಟಿನಲ್ಲಿ ಅಧಿಕಾರಿಗೆ ಮಾನಸಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂಬ ಆರೋಪ ಈ ಯುವತಿ ಮೇಲೆ ಕೇಳಿಬಂದಿತ್ತು. ಕೊನೆಗೂ ಬೆಳಗಾವಿ ವಾಯ್ಸ್ ಸುದ್ದಿ ಸಂಸ್ಥೆ ತನ್ನ ಜವಾಬ್ದಾರಿಯುತ ಕೆಲಸ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ತನಿಖೆ ಮೂಲಕ ಸತ್ಯಾಸತ್ಯತೆ ಹೊರ ಬರಬೇಕಾಗಿದೆ ಅಷ್ಟೇ.