
ಖಾನಾಪುರ : ಖಾಸಗಿ ಶಾಲೆ ಶಿಕ್ಷಕ ಹಾಗೂ ವಿದ್ಯಾರ್ಥಿನಿ ಜೊತೆಗಿನ ಖಾಸಗಿ ವೀಡಿಯೊ ವೈರಲ್

ಖಾನಾಪುರ : ತಾಲೂಕಿನ ಶಾಲೆಯೊಂದರ ಶಿಕ್ಷಕ ಹಾಗೂ ಅದೇ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಜೊತೆಗಿನ ಖಾಸಗಿ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವೀಡಿಯೊ ಒಂದು ವೈರಲ್ ಆಗಿದೆ. ಖಾಸಗಿ ಪ್ರೌಡಶಾಲೆ ಶಿಕ್ಷಣ ಅದೇ ಶಾಲೆಯ ಒಂಬತ್ತನೇ ತರಗತಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿದ್ದ. ಶಾಲಾ ಸಮಯದ ನಂತರವೂ ವಿದ್ಯಾರ್ಥಿನಿಯನ್ನು ಶಿಕ್ಷಕ ಇರಿಸಿಕೊಂಡಿದ್ದ ಎಂಬ ಆರೋಪಗಳು ಕೇಳಿಬರುತ್ತಿವೆ.
ಇನ್ನೂ ಈ ಘಟನೆಯಿಂದ ವಿದ್ಯಾರ್ಥಿನಿ ತುಂಬಾ ನೊಂದುಕೊಂಡಿದ್ದು ಮನೆಯ ಪೋಷಕರು ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಜೊತೆಗೆ ಕೆಲವು ದಿನಗಳಿಂದಲೂ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲವಾದ್ದರಿಂದ ಅವರಿಗೆ ನ್ಯಾಯ ದೊರಕಿಸುವಂತೆ ಎಬಿವಿಪಿ ಆಗ್ರಹಿಸಿದೆ.