ಸಾಹುಕಾರ್ ಗೆ ಮಂತ್ರಿ ಸ್ಥಾನ – ವಿರೋಧಿಗಳನ್ನು ಮಣಿಸಲು ಬಿಜೆಪಿ ಮಹಾ ಅಸ್ತ್ರ
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಹಿಡಿತ ಹೊಂದಿರುವ ಬೆಳಗಾವಿಗೆ ಸಧ್ಯದಲ್ಲಿ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಇಬ್ಬರೂ ಸಂಪುಟಕ್ಕೆ ಸೇರ್ಪಡೆಯಾಗುವುದು ಖಾತ್ರಿ ಆಗಿದೆ.
ಇಬ್ಬರೂ ಶಾಸಕರು ಪ್ರತ್ಯೇಕ ಪ್ರಕರಣದಲ್ಲಿ ಕಾರಣಾಂತರಗಳಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರದ ದಿನಗಳಲ್ಲಿ ಇಬರಿಗೆ ಕ್ಲಿನ್ ಚಿಟ್ ಸಿಕ್ಕಿದ್ದು, ಸಂಪುಟ ಸೇರ್ಪಡೆಗೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ವರ್ಚಸ್ಸು ವೃದ್ಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಜೊತೆಗೆ ಈ ಹಿಂದೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿಯೂ ಇಬ್ಬರೂ ನಾಯಕರು ಸಿಎಂ ಬೊಮ್ಮಾಯಿಗೆ ಬಿಸಿ ಮುಟ್ಟಿಸಿ ಅಧಿವೇಶನ ದಿಂದ ಹೊರಗುಳಿದಿದ್ದರು. ಆ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಬರವಸೆ ನೀಡಿದ್ದು ಸಧ್ಯ ಫಲ ಕೊಡಬಹುದು ಎಂದು ಹೇಳಲಾಗುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಹಿನ್ನಲೆಯಲ್ಲಿ ದೇಹಲಿಯಲ್ಲಿದ್ದು ಪಕ್ಷದ ಹೈಕಮಾಂಡ್ ಗೆ ಈ ಕುರಿತು ಮನವರಿಕೆ ಮಾಡಿ ಕೊಡಿತ್ತಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇಬ್ಬರನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಕ್ಷ ಸಂಘಟನೆ ದೃಷ್ಟಿಯಿಂದ ಇರನ್ನು ತೊಡಗಿಸಿಕೊಳ್ಳುವ ಚಿಂತನೆ ಪಕ್ಕದಲ್ಲಿ ಇದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಬಿಜೆಪಿ ಶಕ್ತಿ ವೃದ್ಧಿಸಲು ಹೈಕಮಾಂಡ್ ತಂತ್ರ – ಈಗಾಗಲೇ ಬೆಳಗಾವಿಯಲ್ಲಿ ಪ್ರಮುಖ ನಾಯಕರನ್ನು ಕಣಳೆದುಕೊಂಡ ಬಿಜೆಪಿಗೆ ಕೊಂಚ ಸಂಕಟ ಎದುರಾಗಿದ್ದು ಸುಳ್ಳಲ್ಲ. ಉಮೇಶ್ ಕತ್ತಿ, ಆನಂದ ಮಾಮನಿ, ಸುರೇಶ್ ಅಂಗಡಿ ಈ ಮೂವರು ಮಾಯಕರ ನಿಧನ ಪಕ್ಕಕ್ಕೆ ನಷ್ಟ ಉಂಟಾಗಿದೆ. ಸಧ್ಯ ಲಕ್ಷ್ಮಣ ಸವದಿ, ಅಭಯ್ ಪಾಟೀಲ್, ಪಿ. ರಾಜೀವ್ ಹಾಗೂ ಮಹಾಂತೇಶ್ ಕವಠಗಿಮಠ ತಮ್ಮ ಸಂಘಟನಾತ್ಮಕ ಕಾರ್ಯ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸಮಾವೇಶಗಳನ್ನು ಬೆಳಗಾವಿ ಕೇಂದ್ರವನ್ನಾಗಿ ಮಾಡಿದ್ದು ಹಾಗೂ ರಮೇಶ್ ಜಾರಕಿಹೊಳಿ ಬದ್ಧ ಎದುರಾಳಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಮತದಾರದಿಗೆ ಉಡುಗೊರೆ ಹಂಚುವ ಈ ಎಲ್ಲಾ ಬೆಳವಣಿಗೆ ಸರಿಯಾಗಿ ಉತ್ತರ ನೀಡಲು ರಮೇಶ್ ಜಾರಕಿಹೊಳಿ ಕೂಡ ಬೇಕೆ ಎಂಬು ಅಭಿಪ್ರಾಯಕ್ಕೆ ಬಿಜೆಪಿ ಬಂದಿದ್ದು ಬಿಜೆಪಿ ಈ ಕುರಿತು ಸಂಪುಟ ವಿಸ್ತರಣೆ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್ ಈಶ್ವರಪ್ಪ ಸಚಿವರಾಗುವ ಎಲ್ಲಾ ಬೆಳವಣಿಗೆ ನಡೆಯುತ್ತಿವೆ.