Select Page

Advertisement

ಬೆಳಗಾವಿ : ಪತ್ರಕರ್ತರ ಸಂಘದ ಹೆಸರಲ್ಲಿ‌ ಬ್ಲ್ಯಾಕ್ ಮೇಲ್ – ಮೂವರ ವಿರುದ್ಧ ಎಸ್ಪಿಗೆ ದೂರು

ಬೆಳಗಾವಿ : ಪತ್ರಕರ್ತರ ಸಂಘದ ಹೆಸರಲ್ಲಿ‌ ಬ್ಲ್ಯಾಕ್ ಮೇಲ್ – ಮೂವರ ವಿರುದ್ಧ ಎಸ್ಪಿಗೆ ದೂರು



ಬೆಳಗಾವಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಟ್ರ್ಯಾಕ್ಟರ್ ತಡೆದು ಅಧಿಕಾರಿಗಳ ಗಮನಕ್ಕೆ ತಂದಿದ್ದಲ್ಲದೆ 15 ಸಾವಿರ ಹಣ ಕೊಡದಿದ್ದರೆ ಸುದ್ದಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಮೂವರು ಪತ್ರಕರ್ತರ ವಿರುದ್ಧ ಎಸ್ಪಿಗೆ ದೂರು ಸಲ್ಲಿಸಲಾಗಿದೆ.

ಖಾನಾಪುರದ ಮೂವರು ಪತ್ರಕರ್ತರಾದ ಪ್ರಸನ್ನ ಕುಂಬಾರ, ನಾಗೇಶ್ ನಾಯ್ಕರ್ ಹಾಗೂ ಜಾವೇದ್ ಮೊಕಾಶಿ‌ ಎಂಬ ಮೂವರು ಬ್ಲ್ಯಾಕ್ ಮೇಲ್ ಪತ್ರಕರ್ತರ ವಿರುದ್ಧ ಮಾಸ್ಕೇನಟ್ಟಿ ಗ್ರಾಮದ ಜ್ಯೋತಿಬಾ ಗಂಗಾರಾಮ ಬೆಂಡಿಗೇರಿ ಎಂಬುವವರು ಎಸ್ಪಿಗೆ ದೂರು ದಾಖಲಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ಮೂವರು ಪತ್ರಕರ್ತರು “ ಕರ್ನಾಟಕ ಪತ್ರಕರ್ತರ ಸಂಘ ” ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಸರಕಾರಿ‌ ನೌಕರರನ್ನು ಹೆದರಿಸಿ ಹಣಕ್ಕೆ ಬೇಡಿಕೆ‌ ಇಡುತ್ತಿದ್ದಾರೆ. ಜೊತೆಗೆ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಮಾಧ್ಯಮದ ಮೇಲೆ ನಂಬಿಕೆ ಕಡಿಮೆಯಾಗಿತ್ತಿದ್ದು‌ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!