
ಭೀಕರ ರಸ್ತೆ ಅಪಘಾತ ; ಬೆಳಗಾವಿ ಯಿಂದ ಕುಂಭಮೇಳಕ್ಕೆ ತೆರಳಿದ್ದ ನಾಲ್ವರು ಸಾವು

ಬೆಳಗಾವಿ : ಪ್ರಯಾಗರಾಜ್ ಗೆ ತೆರಳಿದ್ದ ಬೆಳಗಾವಿ ಮೂಲದ ಯಾತ್ರಾರ್ಥಿಗಳು ಹೊರಟಿದ್ದ ವಾಹನ ಅಪಘಾತ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಮಧ್ಯಪ್ರದೇಶದ ಇಂದೋರ್ ಸಮೀಪದ ಮಾನಪುರ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೆಳಗಾವಿಯ ಗಣೇಶಪುರದ ನಾಲ್ವರು ಸೇರಿದಂತೆ ಒಟ್ಟು ಆರು ಜನ ಮೃತಪಟ್ಟಿದ್ದಾರೆ.
ಮಹಾ ಕುಂಭಮೇಳಕ್ಕೆ ತೆರಳಿದ್ದ 17 ಜನರಿದ್ದ ವಾಹನ ಬೈಕ್ ಗೆ ಡಿಕ್ಕಿ ಸೇರಿ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಆರು ಜನ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.