ಗೋಕಾಕ್ : ವಿದ್ಯುತ್ ದೀಪ ಕದ್ದು ದನದ ಕೊಂಬು ಹಾಕಿದ ಕಿಡಿಗೇಡಿಗಳು, ವೀಡಿಯೋ ವೈರಲ್
ಗೋಕಾಕ್ : ರಸ್ತೆ ಬದಿ ಹಾಕಿದ್ದ ವಿದ್ಯುತ್ ದೀಪ ಕಿತ್ತುಕೊಂಡು ಸತ್ತ ದನದ ಕೊಂಬು ಹಾಕಿರುವ ಘಟನೆ ಗೋಕಾಕ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಈ ಕುರಿತಾದ ವೀಡಿಯೋ ನೋಡಬಹುದು.
ಗೋಕಾಕ ಪಾಲ್ಸದಿಂದ ಗೋಕಾಕಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ ಪಕ್ಕದಲ್ಲಿ ಕೆಲವೆ ದಿನಗಳ ಹಿಂದೆ ಅಳವಡಿಸಿದ್ದ ವಿದ್ಯುತ್ ದ್ವೀಪಗಳನ್ನು ಕಿಡಿಗೇಡಿಗಳು ಕಳವು ಮಾಡಿ, ಆ ಜಾಗದಲ್ಲಿ ಸತ್ತ ದನದ ಕೊಂಬಿನ ಮುಖ ಹಾಕಿ ವಿಕೃತಿ ಮೆರೆದ ಘಟನೆ ಬೆಳಕಿಗೆ ಬಂದಿದೆ.
ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಇಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಹೇಳಿದರೂ ಕ್ಯಾರೆ ಅಂದಿಲ್ಲ.
ಇನ್ನಾದರೂ ಅಂತಹ ಕೀಡಿಗಳ ಪತ್ತೆ ಹಚ್ಚಿ ವಿಚಾರಿಸಿ ಕ್ರಮಕೊಗಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.