
ಆಮ್ ಆದ್ಮಿ ವಿಜಯ ಪಾಟೀಲ ಮನೆ ಸ್ವತ್ತಾ..?

ಬೆಳಗಾವಿ : ದೆಹಲಿ ಹಾಗೂ ಪಂಜಾಬ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ರಾಜ್ಯದಲ್ಲಿ ಸಕ್ರಿಯವಾಗಿರುವ ಆಮ್ ಆದ್ಮಿ ಪಕ್ಷ ಬೆಳಗಾವಿ ಜಿಲ್ಲಾಧ್ಯಕ್ಷರ ಕಪಿಮುಷ್ಠಿಯಿಂದ ಪಕ್ಷಕ್ಕೆ ಮುಜುಗರ ತರಿಸುತ್ತಿದೆ.
ಬೆಳಗಾವಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಅವರ ವ್ಯವಹಾರ ( ರಿಯಲ್ ಎಸ್ಟೇಟ್ ) ಉದ್ಯೋಮಕ್ಕೆ ಸಹಕಾರ ಮಾಡುವ, ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಆಮ್ ಆದ್ಮಿ ಪಕ್ಷವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಸಿದ್ಧತೆ ನಡೆಸಿರುವ ಆಪ್ ರಾಷ್ಟ್ರೀಯ ಪಕ್ಷಗಳ ಘಟಾನುಘಟಿ ನಾಯಕರನ್ನು ಸೆಳೆಯುವಲ್ಲಿ ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಪಕ್ಷ ಸಂಘಟಿಸುವಲ್ಲಿ ನಿರಂತರ ಶ್ರಮ ಪಡುತ್ತಿದ್ದಾರೆ.
ಬೆಳಗಾವಿ ಜಿಲ್ಲಾಧ್ಯಕ್ಷ ತಮ್ಮ ರಿಯಲ್ ಎಸ್ಟೇಟ್ ಲಾಭಕ್ಕಾಗಿ ತಮಗೆ ಬೇಕಾದವರನ್ನು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಆಪ್ ಕಾರ್ಯಕರ್ತರ ವಿರೋಧದ ನಡುವೆಯೂ ಅಪರಾಧ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದವರಿಗೆ ಆಪ್ ನಲ್ಲಿ ಜವಾಬ್ದಾರಿ ನೀಡಿದ್ದು ಪಕ್ಷದ ದುರಂತವೆ ಸರಿ.
ರಾಜದಲ್ಲಿ ಸದ್ದು ಮಾಡಿದ್ದ, ಇಡೀ ಪೊಲೀಸ್ ಇಲಾಖೆಯನ್ನು ನಿಬ್ಬೇರಗಾಗಿಸುವ ತೆಲಗಿ ಚಾಪಾ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿ ಸುಲೇಮಾನ ಮುಲ್ಲಾ ಜೈಲು ಶಿಕ್ಷೆ ಅನುಭವಿಸಿ ಬಂದವನಿಗೆ ಬೆಳಗಾವಿ ಆಪ್ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಆಪ್ ಕಾರ್ಯಕರ್ತರ ವಿರೋಧದ ನಡುವೆ ಬೆಳಗಾವಿ ನಗರದ 58ನೇ ವಾಡ್೯ನ ಜವಾಬ್ದಾರಿ ನೀಡಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಆಪ್ ಆಹಾರವಾಗಲಿದೆ.
ಬೆಳಗಾವಿ ಆಪ್ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಹಕಾರ ಮಾಡುವವರನ್ನು, ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದವರನ್ನು ಆಪ್ ಗೆ ಸೇರ್ಪಡೆ ಮಾಡುತ್ತಿರುವುದು ಇದು ಭ್ರಷ್ಟಾಚಾರ ಮುಕ್ತ ಆಡಳಿಯ ನೀಡುವ ಪಕ್ಷದ ನಿಲುವಿಗೆ ಹಿಡಿದ ಕೈ ಕನ್ನಡಿಯಾಗಿದೆ.
ಬೆಳಗಾವಿ ಆಪ್ ನಲ್ಲಿ ಸರ್ವಾಧಿಕಾರಿ ಧೋರಣೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಪಕ್ಷದಲ್ಲಿ ಸೇರ್ಪಡೆ ಮಾಡಿಕೊಂಡು ಹುದ್ದೆ ನೀಡುತ್ತಿರುವ. ವಿಜಯ ಪಾಟೀಲ ನಡೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆಪ್ ರಾಜ್ಯಾಧ್ಯಕ್ಷ ಪೃಧ್ವಿ ರೆಡ್ಡಿ ಕ್ರಮ ಕೈಗೊಳ್ಳುವವರೆ ಕಾದುನೋಡಬೇಕಷ್ಟೆ.