ಪ್ರೀತಿಸಿ ಮಹಿಳಾ ಹೋರಾಟಗಾರ್ತಿಗೆ ಕೈ ಕೊಟ್ಟ ಯುವಕ ; ಯೇ ಕ್ಯಾ ಹುವಾ…?
ಬೆಳಗಾವಿ : ಸದಾಕಾಲವೂ ಮಹಿಳೆಯ ಪರ ಧ್ವನಿ ಎತ್ತಿದ್ದಲ್ಲದೆ ಹತ್ತಾರು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದ ಮಹಿಳಾ ಹೋರಾಟಗಾರ್ತಿಗೆ ಯುವಕನೋರ್ವ, ಪ್ರೀತಿಸುವುದಾಗಿ ಹೇಳಿ ವಂಚನೆ ಮಾಡಿದ್ದು ನ್ಯಾಯಕ್ಕಾಗಿ ಯುವಕನ ಮನೆ ಮುಂದೆ ಮಹಿಳೆ ಧರಣಿ ಕುಳಿತ ಘಟನೆ ಶುಕ್ರವಾರ ತಾಲೂಕಿನ ಬಿಜಗರ್ಣಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿ, ಹೋರಾಟಗಾರ್ತಿ ಪ್ರಮೋದಾ ಹಜಾರೆ ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ಎಂಬಾತನ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ನಂತರ ಪರ ಸ್ತ್ರೀಯರ ಜೊತೆ ಸಂಪರ್ಕ ಹೊಂದಿದ್ದು ನನಗೆ ನ್ಯಾಯ ನೀಡುವಂತೆ ಮಹಿಳಾ ಹೋರಾಟಗಾರ್ತಿ ಆಗ್ರಹಿಸಿದ್ದಾಳೆ.
ಕಳೆದ ಆರು ವರ್ಷದ ಹಿಂದೆ ಪ್ರಮೋದಾ ಹಾಗೂ ಅಕ್ಷಯ್ ನಡುವೆ ಫೆಸ್ಬುಕ್ ನಲ್ಲಿ ಸ್ನೇಹ ಪ್ರಾರಂಭವಾಗಿತ್ತು. ಇದಾದ ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಕ್ಷಯ್ ರಜೆಗೆ ಊರಿಗೆ ಬಂದಾಗ ಪ್ರಮೋದಾ ಜೊತೆಯಲ್ಲೇ ಇರುತ್ತಿದ್ದ. ಜೊತೆಗೆ ಮದುವೆಯಾಗುವುದಾಗಿ ನಂಬಿಸಿದ್ದು ಈಗ ಬೇರೆ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ನನಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಶುಕ್ರವಾರ ಬಿಜಗರ್ಣಿ ಗ್ರಾಮದ ಯೋಧನ ಮನೆಮುಂದೆ ಧರಣಿ ಕುಳಿತಿದ್ದಾಳೆ.
ಮಹಿಳಾ ಹೋರಾಟಗಾರ್ತಿಯಾಗಿರುವ ಪ್ರಮೋದಾ ಹಜಾರೆ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಡ ಮಾಡುತ್ತಿದ್ದರು. ಹತ್ತಾರು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದ ಹೋರಾಟಗಾರ್ತಿ ಸಧ್ಯ ತಾನೇ ವಂಚನೆಗೆ ಒಳಗಾಗಿದ್ದು ತನ್ನ ನೆರವಿಗೆ ಬರುವಂತೆ ಕಣ್ಣೀರಿಟ್ಟಿದ್ದಾಳೆ.
*******************
ನನ್ನ ಜೊತೆ ಮದುವೆಯಾಗುವುದಾಗಿ ಹೇಳಿದ್ದ ಅಕ್ಷಯ್ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ.
ಈ ವಿಚಾರವಾಗಿ ಅವರ ಮನೆಗೆ ಹೋಗಿ ಮಾತನಾಡಿದಾಗ ಸರಿಪಡಿಸುವುದಾಗಿ ಹೇಳಿ ಮತ್ತೆ ಮೋಸ ಮಾಡಿದ್ದಾರೆ. ಸಾಯುವವರೆಗೂ ಇವರ ಮನೆ ಮುಂದೆ ಧರಣಿ ಕುಳಿತುಕೊಳ್ಳುವೆ. ನ್ಯಾಯಕ್ಕೆ ಹೋರಾಡುವೆ.
ಪ್ರಮೋದಾ ಹಜಾರೆ
ನೊಂದ ಹೊರಾಟಗಾರ್ತಿ