ಹೆರಾಯಿನ್ ಮಾರುತ್ತಿದ್ದ ವ್ಯಕ್ತಿ ಬಂಧನ
ಬೆಳಗಾವಿ : ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 36.16 ಗ್ರಾಂ ಹೆರಾಯಿನ್ ವಶಪಡಿಸಿಕೊಂಡ ಘಟನೆ ನಡೆದಿದೆ.
ಬಾಗೇಶ ಬಲರಾಮ ನಂದಾಳಕರ ಬಂಧಿತ ಆರೋಪಿ. ಬೆಳಗಾವಿ ಅಶೋಕ ನಗರದ ಹೂವಿನ ಮಾರುಕಟ್ಟೆ ಬಳಿ ಹೆರಾಯಿನ್ ಮಾರಾಟ ಮಾಡಲು ಬಂದಿರುವ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಂದಿಶ್ವರ್ ಕುಂಬಾರ್ ಪಿಐ – ಸಿಸಿಬಿ ಬೆಳಗಾವಿ ನಗರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ ಎಚ್ ಸಿ ಎಸ್ ಬಿ ಪಾಟೀಲ್, ಪಿಸಿ ಎ ಎನ್ ರಾಮಗೊನಟ್ಟಿ ಹಾಗೂ ಪಿ ಸಿ ಮಹೇಶ್ ಪಾಟೀಲ್ ದಾಳಿ ನಡೆಸಿದ್ದು, ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.