ಕಟ್ಟಿದ ಮಾಂಗಲ್ಯ ಪರರ ಪಾಲಾಗುವ ಸಂಕಟ ; ಹೆಂಡತಿ ಮದುವೆ ನಿಲ್ಲಿಸುವಂತೆ ಗೋಳಾಡಿದ ಪತಿರಾಯ…!

ಬೆಳಗಾವಿ : ಪರಿಚಯವಿದ್ದ ಯುವತಿಯ ಜೊತೆ 2022 ರಲ್ಲೇ ಮದುವೆ ಆಗಿದ್ದರೂ ಆಕೆಯ ತವರು ಮನೆಯವರು ಬಲವಂತವಾಗಿ ಬೇರೆ ವ್ಯಕ್ತಿಗೆ ಮದುವೆ ಮಾಡಿಕೊಡುತ್ತಿದ್ದು ದಯವಿಟ್ಟು ಈ ಮದುವೆ ನಿಲ್ಲಿಸುವಂತೆ ವ್ಯಕ್ತಿಯೊಬ್ಬ ಬೇಡಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿ ಮೂಲದ ವ್ಯಕ್ತಿ ವೆಂಕಟೇಶ ರಾಥೋಡ್ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದಾನೆ. ಜಿತೆಗೆ ಈಕೆಗೆ ಹಣ ನೀಡಿದ್ದಲ್ಲದೆ ಮನೆಯನ್ನು ಖರೀದಿ ಮಾಡಿ ಕೊಟ್ಟಿದ್ದಾನೆ. ಆದರೆ ಈಗ ಅದೇ ಪತ್ನಿ ಬೇರೊಬ್ಬನ ಜೊತೆ ಸಪ್ತಪದಿ ತುಳಿಯಲು ಹೊರಟಿದ್ದಾಳೆ.
ಈ ಕುರಿತು ಮಾತನಾಡಿರುವ ಸಂತ್ರಸ್ತ ವ್ಯಕ್ತಿ ವೆಂಕಟೇಶ ರಾಥೋಡ್. “ನಾನು ಹಾಗೂ ನನ್ನ ಪತ್ನಿ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ಆದರೆ ಈಗ ಆಕೆಯನ್ನು ಮತ್ತೊಬ್ಬರಿಗೆ ಮದುವೆ ಮಾಡಲು ಯತ್ನಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾನೆ.
ಇದಲ್ಲದೆ, ನನ್ನ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಪತ್ನಿಯ ಮನೆಯವರಿಗೆ ಮನೆ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸಹ ನೀಡಿದ್ದೇನೆ ಎಂದು ಹೇಳಿದ್ದಾನೆ.
ಈ ಸಂಬಂಧ ಅಕ್ಕ ಪಡೆ ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾನೆ. ಇತ್ತೀಚೆಗೆ ಹಿರೆಬಾಗೇವಾಡಿಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದ ವೆಂಕಟೇಶ್ವರ ರಾಠೋಡ್, ಈ ಕುರಿತು ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದ್ದಾನೆ.

