ಮರಿಕಟ್ಟಿ ಸರ್ಕಾರಿ ಶಾಲೆಗೆ ಸುಭಾಷ್ ಸಂಪಗಾಂವಿ ಭೇಟಿ
ಬೈಲಹೊಂಗಲ : ತಾಲೂಕಿನ ಮರಿಕಟ್ಟಿ ಗ್ರಾಮಕ್ಕೆ ಗುರುವಾರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾಂವಿ ಭೇಟಿ ನೀಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಇದೇ ಸಮಯಕ್ಕೆ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳೊಂದಿಗೆ ಮಾಡಿ ಪರೀಕ್ಷಿಸಿದರು. ಬಳಿಕ ಜಲಸಂಜೀವಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀರಿನ ಮಹತ್ವದ ಕುರಿತು ತಿಳಿಹೇಳಿದರು.
ಈ ಸಮಯದಲ್ಲಿ ಗ್ರಾಪಂ ಸದಸ್ಯರಾದ ವಿಠ್ಠಲ ತಳವಾರ, ಮಂಜುನಾಥ ಕುರಿ, ವಿನಯ ಕಲ್ಮಠ, ಕಲ್ಲಪ್ಪ ಶಿಗೀಹಳ್ಳಿ, ಯಲ್ಲಪ್ಪ ಉಪ್ಪಾರಟ್ಟಿ, ಮಹಾಂತೇಶ ಚಿಕ್ಕಮಠ ಸೇರಿದಂತೆ ಇತರರು ಇದ್ದರು.