ಮಳೆ ಹಿನ್ನೆಲೆ ಹುಕ್ಕೇರಿ ತಾಲೂಕಿನ ಕೆಲ ಶಾಲೆಗಳಿಗೆ ರಜೆ ಘೋಷಣೆ
ಬೆಳಗಾವಿ : ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹುಕ್ಕೇರಿ ಹಾಗೂ ಯಮಕನಮರಡಿ ಕ್ಷೇತ್ರದ ಕೆಲ ಶಾಲೆಗಳಿಗೆ ಜುಲೈ. 25 ಕ್ಕೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್. ಯಮಕನಮರಡಿಯ ಘಟಪ್ರಭಾ ನದಿ ವ್ಯಾಪ್ತಿಯ ಕ್ಲಸ್ಟರ್ ಗಳಾದ, ಪಾಶ್ಚಾಪುರ, ಬಸ್ಸಾಪುರ,ಶಹಾಬಂದರ, ಇಸ್ಲಾಂಪುರ, ಹತ್ತರಗಿ, ಹನ್ನೂರು,
ಮಾಸ್ತಿಹೊಳಿ, ದಡ್ಡಿ, ಹಿರಣ್ಯಕೇಶಿ ನದಿ ಪಾತ್ರದ ಹೊಸುರು, ಹೆಬ್ಬಾಳ, ಕುರಣಿ ಕ್ಲಸ್ಟರ್ ಮತ್ತು ಇಂಗಳಿ, ಘೊಡಗೇರಿ, ಬಡಕುಂದ್ರಿ, ನೊಗನಿಹಾಳ, ಸುಲ್ತಾನಪುರ, ಗೋಡವಾಡ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಶಿರಹಟ್ಟಿ ಬಿ.ಕೆ, ಮಸರಗುಪ್ಪಿ, ತುಕ್ಕಾಯಿವಾಡಿ, ಹಗರಾಪುರ ಗಡ, ಸಿಂಧೆವಾಡಿ ಹಿಟ್ನಿ ಶಾಲೆಗಳಿಗೆ ದಿನಾಂಕ 25/07/2024 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಈ ಶಾಲೆಗಳಿಗೂ ಎರಡು ದಿನ ರಜೆ
ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಜುಲೈ 25 ಹಾಗೂ ಜುಲೈ 26 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್. ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಅಂಗನವಾಡಿಗೆ ರಜೆ ಘೋಷಣೆ ಮಾಡಲಾಗಿದೆ.