ಡಿಡಿಪಿಐ ಸಂಜೀವ ಬಿಂಗೇರಿ ನಿವೃತ್ತಿ ಇಂದು
ಧಾರವಾಡ : 1994ರ ತಂಡದ ಹಿರಿಯ ಕೆಇಎಸ್ ಅಧಿಕಾರಿ, ನಗರದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ಆಡಳಿತ ಉಪನಿರ್ದೇಶಕ (ಡಿಡಿಪಿಐ) ಸಂಜೀವ ಬಿ. ಬಿಂಗೇರಿ ಶನಿವಾರ (ನ.30) ತಮ್ಮ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಸರಕಾರಿ ಪ್ರೌಢ ಶಾಲಾ ಮುಖ್ಯಾಧ್ಯಾಪಕರಾಗಿ ಸೇವೆ ಆರಂಭಿಸಿ, ರೋಣ ತಾಲೂಕಿನ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಶಿಕ್ಷಣ ಯೋಜನೆಯ ಸಹಾಯಕ ಸಮನ್ವಯ ಅಧಿಕಾರಿಯಾಗಿ, ಉಪ ಸಮನ್ವಯ ಅಧಿಕಾರಿಯಾಗಿ, ಡಯಟ್ ಹಿರಿಯ ಉಪನ್ಯಾಸಕರಾಗಿ ಸೇವೆಗೈದಿದ್ದಾರೆ.
ಧಾರವಾಡ ಗ್ರಾಮೀಣ ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗೆ ಶಿಕ್ಷಕರು ತೆರೆದುಕೊಳ್ಳುವಂತೆ ಮಾಡಿದ ಪ್ರಶಂಸೆಗೆ ಇವರು ಪಾತ್ರರಾಗಿದ್ದಾರೆ.
ಧಾರವಾಡದ ಶತಮಾನ ಕಂಡ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜ (ಹೆಟ್ರೇಕಾ) ಪ್ರಾಚಾರ್ಯರಾಗಿಯೂ ಅನುಪಮ ಸೇವೆಸಲ್ಲಿಸಿ ಡಿಡಿಪಿಐ ಹುದ್ದೆಗೆ ಪದೋನ್ನತಿ ಹೊಂದಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ನಿಯುಕ್ತಿಗೊಂಡ ಇವರು,
ನಿರ್ವಹಿಸಿದ ಎಲ್ಲಾ ಹುದ್ದೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕ ಆಡಳಿತದ ಶಿಸ್ತು ರೂಢಿಸಿಕೊಂಡಿದ್ದ ಇವರು,
ಸರಳ, ಸೌಜನ್ಯ ಮತ್ತು ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದರು.
ಶನಿವಾರ (ನ.30) ರಂದು ಮುಂಜಾನೆ 11 ಗಂಟೆಗೆ ನಗರದ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜಿನಲ್ಲಿ ಇವರ ಅಭಿನಂದನಾ ಸಮಿತಿಯು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಸಂಜೀವ ಬಿಂಗೇರಿ ಮತ್ತು ಅವರ ಧರ್ಮಪತ್ನಿ ಶೋಭಾ ಬಿಂಗೇರಿ ಅವರನ್ನು ಗೌರವಿಸಿ ಅಭಿನಂದಿಸಲಾಗುವುದು. ಇದೇ ಸಂದರ್ಭದಲ್ಲಿ ವಿವಿಧ ಶಿಕ್ಷಕ ಹಾಗೂ ಇತರೇ ಸಂಘ ಸಂಸ್ಥೆಗಳೂ ಗೌರವಿಸಲಿವೆ ಎಂದು ಸಮಿತಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.