BREAKING : ಬೆಳಗಾವಿ ಕೆಎಸ್ ಆರ್ ಪಿ ಯಲ್ಲಿ ತರಬೇತಿ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿದ ಪೊಲೀಸರು
ಬೆಳಗಾವಿ : ರಾಜ್ಯದಲ್ಲಿ ಅತೀ ದೊಡ್ಡ ಕೆಎಸ್ ಆರ್ ಪಿ ತುಕುಡಿ ತರಬೇತಿ ಶಾಲೆ ಹೊಂದಿರುವ ಬೆಳಗಾವಿಯಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗೆ ಇಲ್ಲಿ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದ ಅಭ್ಯರ್ಥಿ ಸಿಎಂ ಬಸವರಾಜ ಬೊಮ್ಮಾಯಿಗೆ ಟ್ವಿಟ್ ಮಾಡಿರುವುದು ಭಾರಿ ಸಂಚಲನ ಮೂಡಿಸುತ್ತಿದೆ.
ಉತ್ತರ ಕರ್ನಾಟಕದ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಮೊದಲು ಮಂಚೂಣಿಗೆ ಬರುವುದೇ ಎಪಿಎಂಸಿ ಬಳಿ ಇರುವ ಕಂಗ್ರಾಳಿ ತರಬೇತಿ ಶಾಲೆ. ಇತ್ತೀಚೆಗಷ್ಟೆ ಕೆಲ ತರಬೇತಿ ಮುಗಿಸಿದ ಅಭ್ಯರ್ಥಿಗಳ ಪರೇಡ್ ನಲ್ಲಿ ವಿಶ್ವಾ ಯು.ಎಂ. ಸಡಗರದಿಂದ ಕೆಲಸ ನಿರ್ವಹಿಸಿದ್ದರು ಎನ್ನಲಾಗಿದೆ.
ಬೆಳಗಾವಿ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿಶ್ವಾಗೆ ಇಲ್ಲಿ ತರಬೇತಿ ನೀಡುವ ಪೊಲೀಸ್ ಸಿಬ್ಬಂದಿಗಳು ವೈಯಕ್ತಿಕ ನಿಂಧನೆ ಹಾಗೂ ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಟ್ವಿಟರ್ ಖಾತೆಯಲ್ಲಿ ದೂರಿದ್ದಾನೆ.
ರಾಜ್ಯದಲ್ಲಿ ಗಲಾಟೆ, ಗಲಭೆ, ಧೋಂಬಿಗಳು ನಡೆದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತರಬೇತಿ ಪಡೆದು ಕೆಲವೇ ದಿನದಲ್ಲಿ ಕರ್ತವ್ಯಕ್ಕೆ ನಿಯುಕ್ತಿ ಹೊಂದಬೇಕಿದ್ದ ಕೆಎಸ್ ಆರ್ ಪಿ ಅಭ್ಯರ್ಥಿ ವಿಶ್ವಾ ಮೇಲೆ ವೈಯಕ್ತಿಕ ನಿಂಧನೆ ಹಾಗೂ ಹಲ್ಲೆ ಮಾಡಿರುವ ಪೊಲೀಸ್ ಸಿಬ್ಬಂದಿಗಳ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.