ಬೆಳಗಾವಿ ವಾಯ್ಸ್ ಇಂಪ್ಯಾಕ್ಟ್: ತರಬೇತಿ ಶಾಲೆಯ ಅಭ್ಯರ್ಥಿ ಮೇಲೆ ಒತ್ತಡ ಹಾಕಿದ್ದು ಯಾರು ?
ಬೆಳಗಾವಿ : ಕೆಎಸ್ ಆರ್ ಪಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗೆ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಲ್ಲದೆ, ಹಲ್ಲೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟ್ವಿಟರ್ ಮೂಲಕ ದೂರು ಸಲ್ಲಿಸಿದ ಸುದ್ದಿಯನ್ನು ಬೆಳಗಾವಿ ವೈಸ್ ಪ್ರಸಾರ ಮಾಡುತ್ತಿದ್ದ ತರಬೇತಿ ಅಭ್ಯರ್ಥಿ ಕಡೆಯಿಂದಲೇ ಅದನ್ನು ಪೊಲೀಸರು ಒತ್ತಾಯ ಪೂರ್ವಕವಾಗಿ ಕ್ಷಮೆ ಕೋರಿದ ಟ್ವಿಟ್ ಮಾಡಿಸಿದರಾ ಎಂಬ ಅನುಮಾನ ಮೂಡುತಿದೆ.
ಬೆಳಗಾವಿ ವಾಯ್ಸ್ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ತರಬೇತಿ ನೀಡುವ ಪೊಲೀಸರು ಅವಾಚ್ಯಶಬ್ಧಗಳಿಂದ ನಿಂಧಿಸಿ, ಹಲ್ಲೆ ಮಾಡಿದ್ದಾರೆ ಎಂದು ಸಿಎಂಗೆ ಟ್ವಿಟರ್ ಮೂಲಕ ದೂರು ಸಲ್ಲಿಸಿದ ಕೆಲವೇ ಗಂಟೆಯಲ್ಲಿ ಪೊಲೀಸರು ದಬ್ಬಾಳಿಕೆ ಮಾಡಿ ಆ ಟ್ವಿಟರ್ ನಲ್ಲಿ ಮಾಡಿರುವುದು ತಪ್ಪಾಗಿದೆ. ಅದನ್ನು ಸರಿ ಪಡಿಸು ಎಂದು ಬೆಳಗಾವಿ ಕೆಎಸ್ ಆರ್ ಪಿ ತರಬೇತಿ ಶಾಲೆ ಉತ್ತಮವಾಗಿದೆ. ಇಲ್ಲಿನ ಸಿಬ್ಬಂದಿಗಳ ಮೇಲೆ ಅಪಾರವಾದ ಕಾಳಜಿ ಇದೆ ಎಂದು ಮರು ಟ್ವಿಟ್ ಮಾಡಿದ್ದಾನೆ.
ತನ್ನಗೆ ಆದ ಅನ್ಯಾಯದ ಬಗ್ಗೆ ವಿವರಾಗಿ ಮುಖ್ಯಮಂತ್ರಿಗೆ ಟ್ವಿಟರ್ ಮೂಲಕ ದೂರು ಸಲ್ಲಿಸಿದ್ದ ತರಬೇತಿ ಅಭ್ಯರ್ಥಿ ಏಕಾಏಕಿ ಕ್ಣಮೆ ಕೋರಿ ಟ್ವಿಟ್ ಬದಲಾವಣೆ ಮಾಡಿದ್ದು, ವಿವಿಧ ಅನುಮಾನಕ್ಕೆ ಕಾರಣವಾಗಿದೆ.