ನೀರಲ್ಲಿ ಮುಳಗಿ ವಿದ್ಯಾರ್ಥಿ ಸಾವು
ಚಿಕ್ಕೋಡಿ : ಹೊಸ ಹುಡ್ಕೂ ಕಾಲೂನಿ ನಿವಾಸಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ದರ್ಶನ ಕಾಳೆ (18) ಶುಕ್ರವಾರ ಕಾಲೇಜ್‌ನಲ್ಲಿ ಕನಕ ಜಯಂತಿ ಕಾರ್ಯಕ್ರಮ ಆಚರಿಸಿದ ನಂತರ ಕಾಲೇಜ ಬಳಿ ಇರುವ ತೆರೆದ ಬಾವಿಯಲ್ಲಿ ಗೇಳೆಯರ ಜೂತೆ ಈಜಾಡಲು ಹೋದಾಗ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಸಾನಪ್ಪಿರುವ ಘಟನೆ ನಡೆದಿದೆ.
ಸ್ಥಳಿಯರು ಫೋಲಿಸರು ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರಿಂದ ಚಿಕ್ಕೋಡಿ ಅಗ್ನಿಶಾಮಕ ದಳದವರು ಸುಮಾರು ಮೂರು ಘಂಟೆ ಕಾರ್ಯಚರಣೆ ನಡೆಸಿ ಶವವನ್ನು ಮೇಲಕ್ಕೆ ಎತ್ತುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು
ಮೃತ ವಿದ್ಯಾರ್ಥಿಯ ತಾಯಿ ಹತ್ತಿರದ ಹಂಡ್ಯಾನವಾಡಿ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕಿ.
ತಾಲೂಕಿನ ವಿವಿದ ಶಾಲೆಗಳ ಶಿಕ್ಷಕರು ಶಿಕ್ಷಕರ ಸಂಘಟನೆಗಳವರು ಅನ್ನಪೂರ್ಣೇಶ್ವರಿ ಶಿಕ್ಷಣ ಸಂಸ್ಥೆಯವರು ಮತ್ತು ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು ವಿದ್ಯಾರ್ಥಿಯ ಅಂತ್ಯ ಕ್ರಿಯೇಯನ್ನು ರವಿವಾರ ಇಲ್ಲಿನ ಅಂಬೇಡ್ಕರ್ ನಗರಲ್ಲಿ ನೆರವೇರಿಸಲಾಯಿತು.