ಅಥಣಿ – ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ಸಾವು
ಅಥಣಿ : ವಿದ್ಯುತ್ ಇಲಾಖೆಯ ಲಿಂಕ್ ಲೈನ್ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ವಿದ್ಯುತ್ ತಗುಲಿ ಮೃತರಾದ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೆಸ್ಕಾಂ ಇಲಾಖೆಯ ಲಿಂಕ್ ಲೈನ್ ಜೋಡಿಸುವ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹುಬ್ಬಳ್ಳಿಯ ಸಮರ್ಥ ಎಲೆಕ್ಟ್ರಿಕಲ್ ಅವರ ಕೆಲಸಕ್ಕೆ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಬಂದಿದ್ದ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಹಣಮಂತ ಹಾಲಪ್ಪ ಮಗದುಮ್(30) ಹಾಗೂ ಅಶೋಕ ಮಲ್ಲಪ್ಪ ಮಾಳಿ (32) ಎಂಬ ಇಬ್ಬರು ಕಾರ್ಮಿಕರು ಮೃತರಾಗಿದ್ದಾರೆ.