Video – ಹೀಗೆ ಮಾತಾಡು ಅಂತ ಚೀಟಿ ಕೊಟ್ಟಿದ್ವಾ? ಲಕ್ಷಣ ಸವದಿ ಟಾಂಗ್ !
ಬೆಳಗಾವಿ : ನಾವೇನು ಸತೀಶ್ ಜಾರಕಿಹೊಳಿ ಅವರಿಗೆ ಚೀಟಿ ಕೊಟ್ಟು ಹಿಂದೂ ವಿರುದ್ಧ ಹೇಳಿಕೆ ನೀಡಲು ಹೇಳಿಲ್ಲ. ಅವರೇ ಹೇಳಿಕೆ ನೀಡಿದ್ದು ಅದರಿಂದ ಜನರ ಭಾವನೆಗೆ ದಕ್ಕೆ ಆಗಿದ್ದು ಹೊರತಾಗಿ ಅವರ ತೇಜೋವಧೆ ಮಾಡುವ ಉದ್ದೇಶ ನಮಗಿಲ್ಲ ಎಂದು ಮಾಜಿ ಡಿಸಿಎಂ ಲಕ್ಷಣ ಸವದಿ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಸತೀಶ್ ಜಾರಕಿಹೊಳಿ ಅವರ ತೇಜೋವಧೆ ಮಾಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಇವರು. ಸತೀಶ್ ಜಾರಕಿಹೊಳಿ ಅವರಿಗೆ ಮಾತನಾಡುವಂತೆ ಚೀಟಿ ಕೊಟ್ಟೊ ಕಳುಹಿಸಿಲ್ಲ. ಅವರೇ ಮಾತನಾಡಿದ ಮಾತಿನಿಂದ ಅಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ಉಂಟಾಗಿದೆ. ಅವರ ತೇಜೋವಧೆ ನಾವು ಮಾಡುವ ಪ್ರಶ್ನೆ ಇಲ್ಲ ಎಂದರು.
ಘಟಪ್ರಭಾದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರು ಮುತ್ತಿಗೆ ಹಾಕಿದ್ದ ಹಿನ್ನಲೆಯಲ್ಲಿ ಶನಿವಾರ ಬಿಜೆಪಿ ಮುಖಂಡರು ನಗರದ ಪ್ರವಾಸಿ ಮಂದಿರದಲ್ಲಿ ಮಹತ್ವದ ಸಭೆ ಸೇರಿದ್ದರು. ಈ ಸಂದರ್ಭದಲ್ಲಿ ಶಾಸಕ ಅಭಯ್ ಪಾಟೀಲ್, ಸಂಸದ ಈರಣ್ಣ ಕಡಾಡಿ, ಮಹಾಂತೇಶ್ ದೊಡ್ಡಗೌಡರ್, ಸಂಜಯ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.