Select Page

Advertisement

Accident : ತರಕಾರಿ ಲಾರಿ ಪಲ್ಟಿ ಪ್ರಕರಣ – ಮೃತರ ಸಂಖ್ಯೆ 11ಕ್ಕೆ ಏರಿಕೆ

Accident : ತರಕಾರಿ ಲಾರಿ ಪಲ್ಟಿ ಪ್ರಕರಣ – ಮೃತರ ಸಂಖ್ಯೆ 11ಕ್ಕೆ ಏರಿಕೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿ ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಇದೀಗ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿದ್ದರು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಎಂಸಿ ಆಸ್ಪತ್ರೆಯ ನಿರ್ದೇಶಕರಾದ ಎಸ್‌ಎಫ್ ಕಮ್ಮಾರ್ ಅವರು, ಅಪಘಾತದಲ್ಲಿ ಗಾಯಗೊಂಡಿದ್ದ ಜಾಲವ್ ಎಂಬಾತ ಮೃತಪಟ್ಟಿದ್ದಾರೆ, ಉಳಿದ 11 ಗಾಯಾಳುಗಳನ್ನು ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಗಾಯಾಳುಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ, ಸದ್ಯ 11 ಜನ ಚೇತರಿಕೆ ಹಂತದಲ್ಲಿದ್ದು, ಅಪಾಯದಿಂದ ಪಾರಾಗಿದ್ದಾರೆ, ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ವಿವರ : ಮೃತಪಟ್ಟವರು:

  1. ಫಯಾಜ್‌ ತಂದೆ ಇಮಾಮ್‌ಸಾಬ್‌ ಜಮಖಂಡಿ 45-ವರ್ಷ
  2. ವಾಸಿಮ್‌ ತಂದೆ ಮುಲ್ಲಾ ಮುಡಿಗೇರಿ 25- ವರ
  3. ಇಜಜ್‌ ತಂದೆ ಮಸ್‌ತಾಕ್‌ ಮುಲ್ಲಾ 20 ವರ್ಷ
  4. ಸಾದುಕ್‌ ತಂದೆ ಬಾಷಾ ಪರಾಸ್‌ 30 ವರ್ಷ
  5. ಗುಲಾಮ್‌ ಹುಸೇನ್‌ ತಂದೆ ಗುಡುಸಾಬ್‌ ಜವಳಿ
  6. ಇಮ್‌ತಿಯಾಜ್‌ ತಂದೆ ಮೊಹಮ್ಮದ್‌ ಜಾಪರ್‌ ಮುಡಗೇರಿ 40 ವರ್ಷ
  7. ಅಲ್ಪಾಜ್‌ ತಂದೆ ಜಾಪರ ಮಂಡಕಿ 25 ವರ್ಷ
  8. ಜಿಲಾನಿ ತಂದೆ ಅಬ್ದುಲ್‌ ಗಪಾರ್‌ ಜಕಾತಿ 20 ವರ್ಷ
  9. ಅಸ್ಲಾಂ ತಂದೆ ಬಾಬು ಬೇಣ್ಣಿ 24 ವರ್ಷ ಎಲ್ಲರೂ ಸವಣೂರು
  10. ಜಲಾಲ್‌ ತಾರಾ 30 ವರ್ಷ ಸವಣೂರು. (ಹುಬ್ಬಳಿ ಕೀಮ್ಸ್‌ ಆಸ್‌ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ)

ಹುಬ್ಬಳಿ ಕೀಮ್ಸ ಆಸ್ಪತ್ರೆಯಲ್ಲಿ ಚಿಕಿತೆಯಲ್ಲಿರುವುವರು

  1. ಅಶ್ರಪ್‌ ತಂದೆ ನಬಿ ಸಾಬ್‌ ಲಾರಿ ಡ್ರೈವರ್‌ 18 ವರ್ಷ
  2. ಖ್ವಾಜಾ ತಂದೆ ಮೊಹಮ್ಮದ್‌ ಗೌಸ್ ಕಿಸಮತಗಾರ್‌ 22 ವರ್ಷ
  3. ಮೊಹಮ್ಮದ್‌ ಸಾದಿಕ ತಂದೆ ಖ್ವಾಜಾಮೀರ್‌ ಬತ್ತೇರಿ 25 ವರ್ಷ
  4. ಖ್ವಾಜಾ ಮೈನು ತಂದೆ ಬಷೀರ್‌ ಅಹಮ್ಮದ್‌ ಕಾಲೆಕಾಲನ್ನವರ್‌ 24 ವರ್ಷ
  5. ನಿಜಾಮ್‌ 30 ವರ್ಷ
  6. ಮದ್ಲಾನ್‌ ಸಾಬ್‌ 24 ವರ್ಷ
  7. ಜಾಪರ್‌ ತಂದೆ ಮುಕ್ತಿಯಾರ್‌ ಪ್ರಾಸ್‌ 22 ವರ್ಷ

ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು

  1. ಮಲ್ಲಿಕ ರೆಹಾನ್‌ ತಂದೆ ಮೊಹಮ್ಮದ್‌ ರಫೀಕ್‌ ಅಕ್ಕಿ 21 ವರ್ಷ
  2. ಅಪ್ತಾಬ್‌ ತಂದೆ ಭಷೀರ್‌ ಅಹಮಮದ್‌ ಮಂಚಕಿ 23 ವರ್ಷ
  3. ಗೌಸ್‌ ಮೈದ್ದೀನ್‌ ತಂದೆ ಅಬ್ದುಲ್‌ ಗಣಿ ಬೊಮ್ಮನಹಳ್ಳಿ 30 ವರ್ಷ
  4. ಇರ್ಪಾನ್‌ ತಂದೆ ಮುಕ್ಷುಲ್‌ ಗುಡಿಗೇರಿ 17 ವರರ್ಷ
  5. ನೂರ ಅಹಮ್ಮದ್‌ ತಂದೆ ಮೊಹಮ್ಮದ್‌ ಜಾಪರ್‌ ಜಮಕಂಡಿ 30 ವರ್ಷ
  6. ಅಪ್ಸರ್‌ ಕಾಂಜಾಡ್‌ 34 ವರ್ಷ
  7. ಸುಭಾಷ ಗೌಡರ್‌ 17 ವರ್ಷ
  8. ಖಾದ್ರಿ ತಂದೆ ಗೂಡು ಸಾಬ್‌ ಜವಳಿ 26 ವರ್ಷ
  9. ಸಾಬೀರ್‌ ಅಹಮ್ಮದ ಬಾಬಾ ಹುಸೇನ್‌ ಗವಾರಿ 38 ವರ್ಷ
  10. ಮರ್ದಾನ್‌ ಸಾಬ್‌ ತಂದೆ ಕಮಲ್‌ ಬಾಷಾ ತಾರಾಡಿಗ 22 ವರ್ಷ
  11. ರಪಾಯಿ ತಂದೆ ಬಾಕರ್‌ ಚೌರ 21 ವರ್ಷ
  12. ಮೊಹಮ್ಮದ್‌ ಗೌಸ ತಂದೆ ಗಪಾರ್‌ ಅಕ್ತರ್‌ 22 ವರ್ಷ
Advertisement

Leave a reply

Your email address will not be published. Required fields are marked *

error: Content is protected !!