
ಅಥಣಿ : ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಬಾಲಕ ಸಾವು

ಅಥಣಿ : ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಟ್ರೆಲರ್ ಗೆ ಶಾಲಾ ಬ್ಯಾಗ್ ತಗುಲಿ ಚಕ್ರಕ್ಕೆ ಸಿಲುಕಿದ ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಅಥಣಿ ತಾಲೂಕಿನ ತೆವರಟ್ಟಿ ಗ್ರಾಮದ ಸುದರ್ಶನ್ ನಿಲಜಗಿ ( 7 ) ಸಾವನಪ್ಪಿರುವ ಬಾಲಕ. ಮಂಗಳವಾರ ಬೆಳಿಗ್ಗೆ ಚಿಕ್ಕಪ್ಪಣ ಟ್ರ್ಯಾಕ್ಟರ್ ನಲ್ಲಿ ಶಾಲೆಗೆ ತೆರಳಿದ ಸಂದರ್ಭದಲ್ಲಿ ಕೆಳಗಿಳಿದು ನಡೆಯುತ್ತಿದ್ದಾಗ, ಆಕಸ್ಮಿಕವಾಗಿ ಶಾಲಾ ಬ್ಯಾಗ್ ಟ್ರೆಲರ್ ಗೆ ಸಿಲುಕಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನೂ ಘಟನೆ ಕುರಿತಾಗಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.