BREAKING – ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ
ಬೆಳಗಾವಿ : ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದಿದ್ದು, ವಾರ್ಡ್ 57 ರ ನಗರಸೇವಕಿ ಶೋಭಾ ಸೋಮನಾಚೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ವಾರ್ಡ್ -33 ರ ರೇಶ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ.
ಮೊದಲಬಾರಿಗೆ ಪಕ್ಷದ ಅಡಿಯಲ್ಲಿ ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಕಳೆದ ಹದಿನಾರು ತಿಂಗಳಿನಿಂದ ನ್ಯಾಯಾಂಗ ಬಿಕ್ಕಟ್ಟು ಹಿನ್ನಲೆಯಲ್ಲಿ ಸಧ್ಯ ಚುನಾವಣೆ ನಡೆಯುತ್ತಿದೆ. ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಆಡಳಿತ ಪಕ್ಷದ ನಾಯಕರನ್ನಾಗಿ ರಾಜಶೇಕರ್ ಡೋಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ವಕೀಲ ಎಂ.ಬಿ ಜಿರಲಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅಭಿವೃದ್ಧಿ ಪರವಾದ ನಡೆ ನಮ್ಮದು ಮುಂಬರುವ ದಿನಗಳಲ್ಲಿ ಬೆಳಗಾವಿ ನಗರದ ಅಭಿವೃದ್ಧಿಗೆ ನೂತನ ಮೇಯರ್ ಯಾಗೂ ಉಪ ಮೇಯರ್ ಸೇರಿದಂತೆ ಆಡಳಿತ ಪಕ್ಷ ಶ್ರಮಿಸುತ್ತದೆ ಎಂದರು.