
ಗೃಹಲಕ್ಷ್ಮೀ ಉದ್ಘಾಟನೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮರಿಸಿದ್ದು ಯಾರನ್ನು…?/

ಮೈಸೂರು: ಮೈಸೂರಿನಲ್ಲಿ ಬುಧವಾರ ನಡೆದ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ವಿತರಣೆ ಕಾರ್ಯಕ್ರಮದ ವೇದಿಕೆಯ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತವರು ಕ್ಷೇತ್ರವನ್ನು ಸ್ಮರಿಸಿದರು.
ಗೃಹಲಕ್ಷ್ಮೀ ಯೋಜನೆಯ ಸ್ವಾಗತ ಭಾಷಣದಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ಜೊತೆಗೆ, ಸುಳೇಭಾವಿ ಕ್ಷೇತ್ರದ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಉಚಗಾಂವ ಗ್ರಾಮದ ಶ್ರೀ ಮಳೇಕರಣೇಶ್ವರಿ ದೇವಿಯನ್ನು ಸ್ಮರಿಸುವ ಮೂಲಕ ಸಮಾರಂಭಕ್ಕೆ ಗಣ್ಯರನ್ನು ಸ್ವಾಗತಿಸಿದರು.
ಜೊತೆಗೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಶಿರ್ವಾದದಿಂದಾಗಿಯೇ ಇಂದು ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದೂ ಹೇಳಿದರು.