Select Page

ಅಥಣಿ ಬಿಜೆಪಿ ಲೀಡ್ ಪಡೆದಿದ್ದು ಖುಷಿ ಸಂಗತಿ ; ಸವದಿ ವಿರುದ್ಧ ಸಾಹುಕಾರ್ ಪರೋಕ್ಷ ವಾಗ್ದಾಳಿ

ಅಥಣಿ ಬಿಜೆಪಿ ಲೀಡ್ ಪಡೆದಿದ್ದು ಖುಷಿ ಸಂಗತಿ ; ಸವದಿ ವಿರುದ್ಧ ಸಾಹುಕಾರ್ ಪರೋಕ್ಷ ವಾಗ್ದಾಳಿ

ಅಥಣಿ : ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ ಅಥಣಿ ಜನ ಲೀಡ್ ಕೊಟ್ಟಿದ್ದು ಖುಷಿ ವಿಚಾರ. ನಮ್ಮವರು ಒಳ್ಳೆಯ ಕೆಲಸ ಮಾಡುವ ಮೂಲಕ‌ ಕಾಂಗ್ರೆಸ್ ಲೀಡ್ ಕಡಿಮೆ ಮಾಡಿ ಬಿಜೆಪಿಗೆ ಹೆಚ್ಚಿಸಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಕಾಲೆಳೆದರು.

ಬಿಜೆಪಿ ಕಾರ್ಯಕರ್ತರ ಭೇಟಿ ಹಿನ್ನಲೆಯಲ್ಲಿ ಅಥಣಿ ಪಟ್ಟಣಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ಮಾತನಾಡಿ. ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಲೀಡ್ ಕಳೆದುಕೊಂಡಿಟ್ಟು ಸುಮಾರು 72 ಸಾವಿರ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಗೆ ಜನ ಬೇಸತ್ತು ಇವತ್ತು ನಮ್ಮ ಪಕ್ಷದ ಮೇಲೆ ಒಲವು ತೋರಿ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಟ್ಟಿದ್ದಾರೆ ಅದು ಖುಷಿಯ ವಿಚಾರ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರ ಗೆದ್ದುಕೊಂಡಿದೆ. ಕೂಡಲೆ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ಗೆ ವರ್ಗಾವಣೆ ಮಾಡಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಗ್ರಹಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿಕೊಂಡು ಲೋಲಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಳ್ಳಾರಿ, ಹಾಗೂ ರಾಯಚೂರು ಕ್ಷೇತ್ರವನ್ನು ಗೆದ್ದುಕೊಂಡಿದೆ. ಆಂದ್ರ ಹಾಗೂ ಕರ್ನಾಟಕ ಎರಡೂ ಭಾಗದಲ್ಲಿ ಭ್ರಷ್ಟಾಚಾರ ಹಣ ಬಳಕೆಯಾಗಿದೆ. ಸಂಪೂರ್ಣ ತನಿಖೆಯನ್ನು ಸಿಬಿಐ ಗೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಡವರ ಅಭಿವೃದ್ಧಿಗೆ ಇಟ್ಟಿರುವ ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು ರಾಜ್ಯದ ಹಣಕಾಸು ಪರಿಸ್ಥಿತಿ ಅಯೋಮಯ ಆಗಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!