ಮೋದಿಗೆ ಸಿಕ್ಕಿತು ರಷ್ಯಾದ ಅತ್ಯುತ್ತಮ ಪ್ರಶಸ್ತಿ ; ಇದಕ್ಕೂ ಉರಿದುಕೊಂಡ ಕೆಲವರು…!
ಬೆಂಗಳೂರು : ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ದೇಶದ ಅತ್ಯುನ್ನತ ನಾಗರಿಕ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ” ಪ್ರಶಸ್ತಿ ಲಭಿಸಿದೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಅಸಾಧಾರಣ ಸೇವೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್
ಪ್ರದಾನ ಮಾಡಿದರು.
ಯೇಸುವಿನ ಮೊದಲ ಅಪೊಸ್ಟಲ್ ಮತ್ತು ರಷ್ಯಾದ ಪೋಷಕ ಸಂತ ಆಂಡ್ರ್ಯೂ ಅವರ ಗೌರವಾರ್ಥವಾಗಿ 1698 ರಲ್ಲಿ ಜಾರ್ ಪೀಟರ್ ದಿ ಗ್ರೇಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಇದನ್ನು ರಷ್ಯಾದ ಅತ್ಯುನ್ನತ ನಾಗರಿಕ ಸೇವೆ ಅಥವಾ ಮಿಲಿಟರಿ ಸೇವೆಗೆ ಮಾತ್ರ ನೀಡಲಾಗುತ್ತದೆ.
ರಷ್ಯಾದ ಅತ್ಯುನ್ನತ ಪ್ರಶಸ್ತಿ ಭಾರತದ ಪ್ರಧಾನಿ ಅವರಿಗೆ ಲಭಿಸಿದ್ದು ಹೆಮ್ಮೆಯ ವಿಷಯವಾಗಿದ್ದರು ಭಾರತದಲ್ಲಿ ಕೆಲವರು ತಮ್ಮ ಉರಿ ಹೊರಹಾಕುತ್ತಿದ್ದಾರೆ. ಅನೇಕರು ಸಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನದ ಮೂಲಕ ತಳ – ಉರಿ ಹೊರಹಾಕುತ್ತಿರುವುದು ಸಾಮಾನ್ಯವಾಗಿದೆ.
ಆದರೆ ಮೋದಿ ಅವರಿಗೆ ಈ ಪ್ರಶಸ್ತಿ ಲಭಿಸಿದ್ದಕ್ಕೆ ಕೋಟ್ಯಾಂತರ ಭಾರತೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಷ್ಯಾ ಹಾಗೂ ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳ ಶಕ್ತಿ ಎಂತಹದು ಎಂಬುದು ಈ ಎಲ್ಲಾ ಘಟನೆಗಳಿಂದ ಜಗತ್ತಿನಗೆ ತಿಳಿಯುತ್ತಿದೆ.