ಜಮೀನು ವಿವಾದ ; ಕೊಡಲಿಯಿಂದ ಮಹಿಳೆ ಕಾಲು ಕಡಿದ ಕಿರಾತಕ
ಆಂಧ್ರಪ್ರದೇಶ : ಜಮೀನು ಹಂಚಿಕೆ ವಿಚಾರವಾಗಿ ತನ್ನ ಅಕ್ಕನ್ನನ್ನೇ ಕ್ರೂರಿಯೋರ್ವನು ಕೊಡಲಿಯಿಂದ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚಾರ್ಲ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಪಾಲು ಕೇಳ್ತೀಯಾ ಎಂದು ಪಾಪಿ ಸಹೋದರ ಜಿಲಾನಿ ಎಂಬುವವನು ತನ್ನ ಅಕ್ಕ ಮೆಹಬೂಬಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಪಾಲು ಯಾಕೆ ಕೊಡಬೇಕು? ನಿನ್ನ ಕಾಲು ಕಡಿಯುವೆ ಎಂದು ರಾಕ್ಷಸನಂತೆ ವರ್ತಿಸಿ ಕೊಡಲಿಯಿಂದ ಭೀಕರವಾಗಿ ಅಕ್ಕನ ಕಾಲುಗಳಿಗೆ ಕೊಡಲಿ ಏಟು ಕೊಟ್ಟಿದ್ದಾನೆ.
ಅಕ್ಕ ಎಷ್ಟೇ ಅಂಗಲಾಚಿದರು ರಾಕ್ಷಸ ತಮ್ಮ ಕನಿಕರವಿಲ್ಲದೇ ಹಲ್ಲೆ ಮಾಡಿದ್ದಾನೆ. ದಾಳಿಯಲ್ಲಿ ಮೆಹಬೂಬಿ ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿ ಜಿಲಾನಿಯನ್ನು ಪೊಲೀಸರು
ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.