Select Page

ಕಳ್ಳತನ ಪ್ರಕರಣ, ಇಬ್ಬರು ಆರೋಪಿಗಳ‌ ಬಂಧನ ; ಲಕ್ಷಾಂತರ ಮೌಲ್ಯದ ವಸ್ತು ವಶ

ಕಳ್ಳತನ ಪ್ರಕರಣ, ಇಬ್ಬರು ಆರೋಪಿಗಳ‌ ಬಂಧನ ; ಲಕ್ಷಾಂತರ ಮೌಲ್ಯದ ವಸ್ತು ವಶ

ಬೆಳಗಾವಿ : ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ
ಇಬ್ಬರು ಆರೋಪಿಗಳನ್ನು ಬಂಧಿಸುವವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಡೇಬಜಾರ ಪೊಲೀಸ್ ಠಾಣೆ ಹಾಗೂ ಕ್ಯಾಂಪ್ ಪೊಲೀಸ್ ಠಾಣೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬೆಳಗಾವಿ ತಾಲೂಕಿನ ಕಿನಯೇ ಗ್ರಾಮದ ಚೇತನ ಮಾರುತಿ ಶಿಂಧೆ (26), ಹಾಗೂ ಅನಗೋಳದ ಕರಣ್ ಉತ್ತಮ ಮುತಗೇಕರ್ (27)
ಇಬ್ಬರು ಬಂಧಿತ ಆರೋಪಿಗಳು.

ಬೆಳಗಾವಿ ನಗರದ ಖಡೇಬಜಾರ, ಕ್ಯಾಂಪ್ ಮತ್ತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಒಟ್ಟು ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ 77 ಗ್ರಾಂ ಬಂಗಾರದ ಆಭರಣ, 200 ಗ್ರಾಂ ಬೆಳ್ಳಿಯ ಆಭರಣಗಳು, ಲ್ಯಾಪಟಾಪ್, ಮೊಬೈಲ್ ಹಾಗೂ ನಗದು 10 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ಖಡೇಬಜಾರ ಉಪ ವಿಭಾಗದ ಎಸಿಪಿ ಶೇಖರಪ್ಪ ಎಚ್ ಮಾರ್ಗದರ್ಶನದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಖಡೇಬಜಾರ ಪೊಲೀಸ್ ಠಾಣೆಯ ಇನ್ಸಪೇಕ್ಟರ ಡಿ.ಪಿ ನಿಂಬಾಳಕರ ಮತ್ತು ಕ್ಯಾಂಪ ಪೊಲೀಸ್ ಠಾಣೆಯ ಇನ್ಸಪೇಕ್ಟರ ಅಲ್ತಾಫ ಮುಲ್ಲಾ, ಪಿಎಸ್ಐ ಆನಂದ ಆದಗೊಂಡ ಸಿಬ್ಬಂದಿಗಳಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ, ಎಮ್ ವಿ

ಅರಳಗುಂಡಿ, ಎಸ್ ಎಚ್ ತಳವಾರ, ಎಸ್ ಬಿ ಬರಗಿ, ಬಿ ಎಲ್ ಸರವಿ, ವಿ ವಾಯ್ ಗುಡಿಮೇತ್ರಿ, ಜಿ ಪಿ ಅಂಬಿ, ಎಸ್ ಬಿ ಭೂಸನೂರಮಠ ಹಾಗೂ ಬೆರಳು ಮುದ್ರ ಘಟಕದ ಸಿಬ್ಬಂದಿ ಜನರು ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಎಸ್ ಅಕ್ಕಿ, ಮಹಾದೇವ ಕಾಶೀದ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!