
ಉಡುಪಿಗೆ ಭೇಟಿನೀಡಿ ಹರಕೆ ತೀರಿಸಿದ ಸೂರ್ಯಕುಮಾರ್ ದಂಪತಿ

ಉಡುಪಿ : ವಿಶ್ವಕಪ್ ವಿಜೇತ ತಂಡದ ಆಡಗಾರ ಹಾಗೂ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆದುಕೊಂಡರು.
ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮೂಲದವರಾದ ದೇವಿಶಾ ಶೆಟ್ಟಿ ಅವರು ಭಾರತ ವಿಶ್ವಕಪ್ ಗೆದ್ದರೆ ಕಾಪು ಮಾರುಗುಡಿ ದೇಗುಲಕ್ಕೆ ಭೇಟಿ ನೀಡುವ ಹರಕೆ ಹೊತ್ತುಕೊಂಡಿದ್ದರು. ಸಧ್ಯ ಭಾರತ ವಿಶ್ವಕಪ್ ಬಿಜೇತ ತಂಡವಾಗಿದ್ದು ಈ ಹಿನ್ನಲೆಯಲ್ಲಿ ಕಾಪು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ದೇವಿ ದರ್ಶನ ಪಡೆದು ಮಾತನಾಡಿದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್. ವಿಶ್ವಕಪ್ ಪೈನಲ್ ಪಂದ್ಯದಲ್ಲಿ ನನಗೆ ಕೊನೆಯದಾಗಿ ಕ್ಯಾಚ್ ಹಿಡಿಯುವ ಅವಕಾಶ ಸಿಕ್ಕಿತ್ತು. ನಾನು ಯಾವುದೇ ರೀತಿಯಲ್ಲಿ ಬೌಂಡರಿ ಲೈನ್ ಮುಟ್ಟಿಲ್ಲ. ಈ ಕುರಿತು ಕೆಲವರು ಆಡಿಕೊಳ್ಳುತ್ತಾರೆ ಆದರೆ ನಾನು ಮಾತ್ರ ಬೌಂಡರಿ ಒಳಗೆ ಇದ್ದೆ ಎಂದು ಸ್ಪಷ್ಟಪಡಿಸಿದರು.