ಚೆನೈ ಮಡಿಲಿಗೆ 2021 ರ ಐಪಿಎಲ್ ಟ್ರೋಫಿ : ಗೆದ್ದು ಬೀಗಿದ ಧೋನಿ ಪಡೆ
IPL : ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಸಿ ಎಸ್ ಕೆ ನೀಡಿದ್ದ 193 ರನ್ ಗುರಿ ಬೆನ್ನಟ್ಟಿದ್ದ ಕೆಕೆಆರ್ ತಂಡ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆರಂಭದ ಜೊತೆಯಾಟದಲ್ಲಿ ಗೆಲುವಿನತ್ತ ಮುಖ ಮಾಡಿದ್ದ ಕೆಕೆಆರ್ ಗೆ, ಶುಭಮ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಜೊತೆಯಾಟ ನೀಡಿದ್ದರು. ಆದರೆ ಚೆನೈ ಶಿಸ್ತಿನ ಬೌಲಿಂಗ್ ದಾಳಿ ಪ್ರದರ್ಶನ ಮಾಡುವ ಮೂಲಕ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.