ಅಥಣಿ-VIDEO- : ನಡು ರಸ್ತೆಯಲ್ಲೇ ಮೊಸಳೆಯ ಅಂದಾ ದರ್ಬಾರ್
ಅಥಣಿ : ನದಿಯಲ್ಲಿದ್ದ ಮೊಸಳೆಯೊಂದು ನಡು ರಸ್ತೆಗೆ ಬಂದು ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬೆನ್ನಟ್ಟಿದ್ದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಸೇತುವೆ ಮೇಲೆ ನಡೆದಿದೆ.
ಬೃಹತ್ ಗಾತ್ರದ ಮೊಸಳೆಯೊಂದು ಗುರುವಾರ ರಾತ್ರಿ ಅಥಣಿ ಗೋಕಾಕ್ ರಸ್ತೆಯ ಕೃಷ್ಣಾ ನದಿಯ ದರೂರ ಸೇತುವೆ ಮೇಲೆ ಬಂದಿದೆ. ದಾರಿಯಲ್ಲಿ ಸಾಗುತ್ತಿರುವ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬೆನ್ನಟ್ಟಿರುವ ವೀಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗಿದೆ.
ಕಳೆದ ಒಂದು ತಿಂಗಳಿನಿಂದ ಬೃಹತ್ ಗಾತ್ರದ ಮೊಸಳೆಯೊಂದು ಕೃಷ್ಣಾ ನದಿಯಲ್ಲಿ ವಾಸವಿದ್ದು ನದಿ ಪಾತ್ರದ ಜನರಲ್ಲಿ ಭಯ ಮೂಡಿದೆ. ಈವರೆಗೆ ಕೂಡಾ ತಾಲೂಕು ಆಡಳಿತ ಮೊಸಳೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಧ್ಯ ಮೊಸಳೆ ರಸ್ತೆಗೆ ಬಂದಿದೆ.