ವಿಸ್ಮಯ : ಮುಖವೇ ಇಲ್ಲದ ಕುರಿಮರಿ ಜನ್ಮ
ತಮಿಳುನಾಡು : ಪ್ರಾಣಿ ಸಂಕುಲದಲ್ಲಿ ಆಗಾಗ್ಗೆ ಅನೇಕ ವಿಸ್ಮಯಕರ ಘಟನೆಗಳು ನಡೆಯುವುದು ಸಾಮಾನ್ಯ. ಅಂತಹುದೇ ಒಂದು ಘಟನೆ ಬೆಳಕಿಗೆ ಬಂದಿದ್ದು ಈ ಕುರಿಮರಿ ಮುಖವೇ ಇಲ್ಲದೆ ಜನ್ಮತಾಳಿದೆ.
ಹೌದು ತಮಿಳುನಾಡಿನ ಶೂಲಗಿರಿಯಲ್ಲಿ ಕುರಿಯೊಂದು ಮುಖವೇ ಇಲ್ಲದ ಮರಿಗೆ ಜನ್ಮ ನೀಡಿದೆ. ರೈತರ ಮನೆಯಲ್ಲಿ ಹುಟ್ಟಿದ ಈ ಕುರಿ ಮರಿಗೆ ಮುಖವೇ ಇಲ್ಲ. ಇನ್ನೊಂದು ವಿಶೇಷವೆಂದರೆ ಕುರಿಗೆ ಎರಡು ಕಿವಿಗಳಿಗೆ ಆದರೆ ಬಾಯಿ, ಮೂಗು ಹಾಗೂ ಕಣ್ಣುಗಳಿಲ್ಲ. ಉಸಿರಾಟ ತಗೆದುಕೊಳ್ಳಲು ಆಗದೆ ಮರಿ ಪ್ರಾಣ ಬಿಟ್ಟಿದೆ.
ಸಾಮಾನ್ಯ ಕುರಿಯಂತೆ ಇದಕ್ಕೂ ನಾಲ್ಕು ಕಾಲು ಇತ್ತು. ತಾಯಿ ಹೊಟ್ಟೆಯಲ್ಲಿ ಇರುವಾಗ ಬದುಕಿದ್ದ ಮರಿ, ಹೊರ ಬಂದು ಕರಳು ಕಡಿದುಕೊಂಡ ನಂತರ ಸಾವನಪ್ಪಿದೆ.