Select Page

ಈ ಬಣ್ಣಗಳಿಂದ ನೀವು ಯಾವ ಹೆದ್ದಾರಿ ಎಂದು ತಿಳಿದುಕೊಳ್ಳಬಹುದು..!

ಈ ಬಣ್ಣಗಳಿಂದ ನೀವು ಯಾವ ಹೆದ್ದಾರಿ ಎಂದು ತಿಳಿದುಕೊಳ್ಳಬಹುದು..!

ಬೆಳಗಾವಿ ವಾಯ್ಸ್ : ಸಾಮಾನ್ಯವಾಗಿ ಅನೇಕರಿಗೆ ತಾವು ಸಂಚರಿಸುವ ಹೆದ್ದಾರಿ ಬಗ್ಗೆ ಮಾಹಿತಿ ಇರುವುದಿಲ್ಲ. ಇದು ರಾಜ್ಯ ಹೆದ್ದಾರಿಯಾ…? ಇಲ್ಲ ರಾಷ್ಟ್ರೀಯ ಹೆದ್ದಾರಿಯಾ…? ಎಂಬ ಪ್ರಶ್ನೆ ಯಾವತ್ತೂ ಕಾಡುತ್ತಿರುತ್ತದೆ. ಆದರೆ ಈ ಒಂದು ಸಣ್ಣ ಸುಳಿವು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಸಂಚರಿಸುವ ರಸ್ತೆ ಯಾವ ಹೆದ್ದಾರಿ ಎಂಬುದನ್ನು ಪತ್ತೆ ಹಚ್ಚಲು ಒಂದು ಸೂಕ್ಷ್ಮದೃಷ್ಟಿ ಹಾಯಿಸಿದರೆ ಸಾಕು. ಕಿಲೊಮೀಟರ್ ಕಲ್ಲುಗಳಲ್ಲಿ ಈ ಮಾಹಿತಿ ಸಿಗುತ್ತದೆ.

ರಾಷ್ಟ್ರೀಯ ಹೆದ್ದಾರಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಲ್ಲಿ ಅಳವಡಿಸಿರುವ ಕಿಲೋಮೀಟರ್ ಕಲ್ಲಿನ ಬಣ್ಣ. ಮೇಲೆ ಹಳದಿ ಇದ್ದು ಕೆಳಗೆ ಬಿಳಿ ಬಣ್ಣ ಬಳದಿದ್ದರೆ ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕರೆಯಲಾಗುತ್ತದೆ. ಜೊತೆಗೆ NH – ಪದ ಬಳಸಲಾಗುತ್ತದೆ.

ರಾಜ್ಯ ಹೆದ್ದಾರಿ : ಇನ್ನೂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುವಾಗ ಕಿಲೋಮೀಟರ್ ಕಲ್ಲಿಗೆ ಮೇಲೆ ಹಸಿರು ಕೆಳಗೆ ಬಿಳಿ ಬಣ್ಣ ಬಳೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ನೀವು ರಾಜ್ಯ ಹೆದ್ದಾರಿ ಎಂದು ಗುರುತಿಸಬೇಕು.

ಜಿಲ್ಲಾ ಹೆದ್ದಾರಿ : ಅನೇಕರಿಗೆ ‌ಮೂಡುವ ಗೊಂದಲಗಳು ಇಲ್ಲಿಯೇ. ಜಿಲ್ಲಾ ಹೆದ್ದಾರಿ ಗಮನಿಸಬೇಕಾದರೆ. ಕಿಲೋಮೀಟರ್ ‌ಕಲ್ಲಿಗೆ ಮೇಲೆ ಕಪ್ಪು ಹಾಗೂ ಕೆಳಗೆ ಬಿಳಿ ಬಣ್ಷ ಬಳಿದಿರುತ್ತಾರೆ.‌ ಇದರಿಂದ ನಾವು ಜಿಲ್ಲಾ ಹೆದ್ದಾರಿ ಎನ್ನಬಹುದು.

ಗ್ರಾಮೀಣ ಹೆದ್ದಾರಿ : ಸಾಮಾನ್ಯವಾಗಿ ಗ್ರಾಮೀಣ ಹೆದ್ದಾರಿಯ ಕಿಲೋಮೀಟರ್ ಕಲ್ಲಿಗೆ ಮೇಲೆ ಕೇಸರಿ ಹಾಗೂ ಕೆಳಗೆ ಬಿಳಿ ಬಣ್ಣ ಬಳೆದಿರುತ್ತಾರೆ. ಇವಿಷ್ಟು ನಾವು ಪ್ರತಿನಿತ್ಯ ಸಾಗುವ ಹೆದ್ದಾರಿಗಳ ಕುರಿತಾದ ಮಾಹಿತಿ.

Advertisement

Leave a reply

Your email address will not be published. Required fields are marked *

error: Content is protected !!