ಭಾರತಕ್ಕೆ ಮತ್ತೊಂದು ಪದಕ ಪಕ್ಕಾ ; ಕುಸ್ತಿಯಲ್ಲಿ ಪೈನಲ್ ತಲುಒಇದ ವಿನೇಶ್ ಪೋಗಟ್
ಪ್ಯಾರಿಸ್ : ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ ಆಗಿದ್ದು 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ
ಭಾರತದ ವಿನೇಶ್ ಪೋಗಟ್ ಫೈನಲ್ ತಲುಪಿದ್ದಾರೆ.
ಒಲಿಂಪಿಕ್ಸ್ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ವಿನೇಶ್ ಪೋಗಟ್ ಅವರಿಗೆ ಸಲ್ಲುತ್ತಿದೆ.
ಹಾಗೆಯೇ ಒಲಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಕುಸ್ತಿಪಟು ವಿನೇಶ್. ಪುರುಷರ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಫೈನಲ್ ತಲುಪಿದ್ದರು.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡಿ, ಬಿಜೆಪಿ ಬೆಂಬಲಿಗರಿಂದ ಟೀಕೆ, ಅವಹೇಳನಕ್ಕೆ ಒಳಗಾಗಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸಧ್ಯ ಐತಿಹಾಸಕ ಸಾಧನೆ ಮಾಡುವ ಮೂಲಕ ತಮ್ಮ ವಿರುದ್ಧ ನಡೆದ ಘಟನೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.
ಬುಧವಾರ ನಡೆಯಲಿರುವ ಪೈನಲ್ ಪಂದ್ಯದಲ್ಲಿ ವಿನೇಶ್ ಅಮೇರಿಕಾ ಕುಸ್ತಿಪಟು ಎದುರಿಸಲಿದ್ದು ಚಿನ್ನದ ಭರವಸೆ ಮೂಡಿಸಿದ್ದಾಳೆ.