
RCB ಮಾರಕ ದಾಳಿಗೆ ತತ್ತರಿಸಿದ ಕೆಕೆಆರ್

ಐಪಿಎಲ್ ಸುದ್ದಿ : ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ RCB ಹಾಗೂ KKR ಮಧ್ಯೆ ಕಾಳಗ ಏರ್ಪಟ್ಟಿದ್ದು ಕೊಲ್ಕತ್ತಾ ಬ್ಯಾಟಿಂಗ್ ಪಡೆಯನ್ನು ಕೇವಲ 174 ರನ್ ಗೆ ಕಟ್ಟಿ ಹಾಕುವಲ್ಲಿ ಆರ್ ಸಿ ಬಿ ಬೌಲಿಂಗ್ ವಿಭಾಗ ಯಶಸ್ವಿಯಾಗಿದೆ.
ಕೆಕೆಆರ್ ನಾಯಕ ರಹಾನೆ ಹಾಗೂ ಸುನಿಲ್ ನರೈನ್ ಅವರ ಸ್ಪೋಟಕ ಬ್ಯಾಟಿಂಗ್ ಮಧ್ಯೆಯೂ ಆರ್ ಸಿ ಬಿ ಬೌಲಿಂಗ್ ಅದ್ಬುತ ದಾಳಿ ನಡೆಸಿತು. ರಹಾನೆ ( 56 ) ಹಾಗೂ ನರೈನ್ ( 44 ) ಶತಕದ ಜೊತೆಯಾಟದ ಮಧ್ಯೆಯೂ ಕೆಕೆಆರ್ ಕೇವಲ 174 ರನ್ ಗಳಿಸಲು ಶಕ್ತವಾಯಿತು.
ಆರ್ ಸಿ ಬಿ ಪರ ಕೃನಾಲ್ ಪಾಂಡ್ಯ – 3 ಹಾಗೂ ಹೆಜಲ್ ವುಡ್ 2 ವಿಕೆಟ್ ಪಡೆದು ಮಿಂಚಿದರು. ಕೆಕೆಆರ್ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.