
ಇದು ನನ್ನ ನೆಲ ಎಂದ ಕೆ.ಎಲ್ ರಾಹುಲ್ ; ಡೆಲ್ಲಿ ಗೆ ರೋಚಕ ಜಯ ತಂದುಕೊಟ್ಟ ಕನ್ನಡಿಗ

ಬೆಂಗಳೂರು : ಮನೆ ಅಂಗಳದಲ್ಲಿ ಸತತ ಎರಡನೇ ಸೋಲಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಭಂಗ ಅನುಭವಿಸುವಂತಾಗಿದೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಹೊಡೆತಕ್ಕೆ ಆರ್.ಸಿ.ಬಿ ಮಣ್ಣು ಮುಕ್ಕಿದೆ.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲು ಶಕ್ತವಾಗಿತು. ಫಲ್ ಸಾಲ್ಟ್ – 37 ಹಾಗೂ ಟೀಂ ಡೆವಿಡ್ – 37 ಹಾಗೂ ರಜತ್ ಪಟಿದಾರ್ – 25 ರನ್ ಗಳಿಸಿದರು. ಡೆಲ್ಲಿ ಕೆಪಿಟಲ್ ಪರ ಕುಲದೀಪ್ ಹಾಗೂ ವಿಪ್ರಜ್ ತಲಾ ಎರಡು ವಿಕೆಟ್ ಪಡೆದರು.
ನಂತರ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ 17.5 ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸುಲಭದ ಜಯ ದಾಖಲಿಸಿತು. ಡೆಲ್ಲಿ ಪರ ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ 93 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಡೆಲ್ಲಿ ಗೆಲುವು ದಾಖಲಿಸುತ್ತಿದ್ದಂತೆ ಕೆ.ಎಲ್ ರಾಹುಲ್ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿ ಮಿಂಚಿದರು. ಇದು ನನ್ನ ನೆಲ ಎನ್ನುವ ರೀತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆ ಬೆಟ್ಟು ಮಾಡಿ ತೋರಿಸಿದ್ದು ವಿಶೇಷವಾಗಿತ್ತು.
______ಕ್ಯಾಪಿಟಲ್ಸ್ · 169/4 (17.5)_______
ಕೆಎಲ್ ರಾಹುಲ್
93* (53)
ಟ್ರಿಸ್ಟಾನ್ ಸ್ಟಬ್ಸ್
38* (23)
ಅಕ್ಷರ್ ಪಟೇಲ್
15 (11)
**********
_______ರಾಯಲ್ ಚಾಲೆಂಜರ್ಸ್ · 163/7 (20)___
ಫಿಲ್ ಸಾಲ್ಟ್
37 (17)
ಟಿಮ್ ಡೇವಿಡ್
37* (20)
ರಜತ್ ಪಾಟಿದಾರ್
25 (23)
********