ಬೆಳಗಾವಿ : ಕಳೆದ‌ ಮೂರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಮಿಯೋರ್ವ ಅಪ್ರಾಪ್ತ ಬಾಲಕಿಗೆ ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಔರಂಗಜೇಬ (23) 16 ವರ್ಷದ ಅಪ್ರಾಪ್ತೆಯನ್ನು ಕಳೆದ ಮೂರು‌ ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕುಡಿದ ನಶೆಯಲ್ಲಿ ಪದೇ ಪದೇ ಅಪ್ರಾಪ್ತೆ ಬಾಲಕಿಯ ಮನೆ ಮನೆಗೆ ಚಾಕು, ಜಂಬೆ ಮಾರಕಾಸ್ತ್ರಗಳನ್ನು ತೆಗೆದುಕೊಂಡು‌ ಹೋಗಿ ಮದುವೆ ಮಾಡಿಸುವ ಎಂದು ಪೀಡಿಸುತ್ತಿದ್ದ.

ಕೊನೆಗೆ ಕಳೆದ ನಾಲ್ಕದು ದಿನದ ಹಿಂದೆ ತನ್ನ ಗೆಳೆಯನ ಸಹಾಯದಿಂದ ಅಪ್ರಾಪ್ತೆ ಬಾಲಕಿ ಮನೆಗೆ ಹೋಗಿ ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ‌ಮಾಡಿ ಪರಾರಿಯಾಗಿದ್ದಾನೆ.

ಅತ್ಯಾಚಾರ ಮಾಡಿದ್ದ ಆರೋಪಿಗೆ ಸಹಾಯ ಮಾಡಿದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಔರಂಗಜೇಬನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.