ಬೆಳಗಾವಿ :  ಕೆಎಲ್‌ಇ ಸಂಸ್ಥೆಯು ತನ್ನ 111ನೇ ಸಂಸ್ಥಾಪನಾ ದಿನಾಚರಣೆಯನ್ನು ಬೆಳಗಾವಿಯ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಸಮಾವೇಶ ಕೇಂದ್ರದಲ್ಲಿ ಆಚರಿಸಿತು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಸಲ್ಲಿಸಿದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಕಾರ್ಯಕ್ರಮವು ಕೆಎಲ್‌ಇ ಸಂಗೀತ ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಐಐಟಿ ಧಾರವಾಡದ ನಿರ್ದೇಶಕ ಹಾಗೂ ಕೆಎಲ್‌ಇ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರೊ. ವೆಂಕಟಪ್ಪಯ್ಯ ಆರ್. ದೇಸಾಯಿ ಅವರು ಕೆಎಲ್‌ಇ ಸಂಸ್ಥೆಯೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಮೆಲುಕು ಹಾಕಿದರು. ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಪಯಣವನ್ನು ರೂಪಿಸಿದ ಗುರುಗಳ ಮಾರ್ಗದರ್ಶನವನ್ನು ಸ್ಮರಿಸಿದರು. ಶಿಕ್ಷಣವು ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಯ ಸಾಧನ ಎಂದು ಹೇಳಿದ ಅವರು, ಡಾ. ಪ್ರಭಾಕರ ಬಿ. ಕೋರೆ ಅವರ ಪದ್ಮಶ್ರೀ ಗೌರವ ಮತ್ತು ದೂರದರ್ಶಿ ನಾಯಕತ್ವವನ್ನು ಶ್ಲಾಘಿಸಿದರು. ಭಾರತದ ಶೈಕ್ಷಣಿಕ ಪರಂಪರೆಯನ್ನು ಹೊಸ ಪ್ರವೃತ್ತಿಗಳೊಂದಿಗೆ ಬೆಸೆಯುವ ಮಹತ್ವವನ್ನು ಒತ್ತಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಶ್ರೀ ಅಮಿತ್ ಪಿ. ಕೋರೆ ಅವರು ಪ್ರಸ್ತಾವಿಕ ನುಡಿಗಳ ನಾಡುತ್ತಾ ಸಂಸ್ಥೆಯ ಪಯಣವನ್ನು ವಿವರಿಸಿದರು. 1916ರಲ್ಲಿ ಏಳು ದೂರದರ್ಶಿ ಶಿಕ್ಷಕರಿಂದ ಆರಂಭವಾದ ಸಂಸ್ಥೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 300ಕ್ಕೂ ಹೆಚ್ಚು ಸಂಸ್ಥೆಗಳ ಜಾಲವಾಗಿ ಬೆಳೆದಿದೆ ಎಂದು ಹೇಳಿದರು. ಭವಿಷ್ಯಕ್ಕಾಗಿ ಐದು ಆದ್ಯತೆಗಳನ್ನು ಅವರು ವಿವರಿಸಿದರು. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ನಾವೀನ್ಯತೆ, ಎಲ್ಲರಿಗೂ ದೊರೆಯುವ ಆರೋಗ್ಯ ಸೇವೆ, ಸುಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿ ಹಾಗೂ ಸಾಂಸ್ಥಿಕ ಏಕತೆ ಇವೇ ಆ ಐದು ಆದ್ಯತೆಗಳು.

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶ್ರೀ ಮಹಾಂತೇಶ ಎಸ್. ಕೌಜಲಗಿ ಅಧ್ಯಕ್ಷೀಯ ಭಾಷಣ ಮಾಡಿ ಸಪ್ತಋಷಿಗಳು ಕಟ್ಟಿದ ಸಂಸ್ಥೆಯಲ್ಲಿ ಜಾಗತಿಕವಾಗಿ ವಿಸ್ತರಿಸಿದೆ. ಅವರ ತ್ಯಾಗ ಬಹು ದೊಡ್ಡದು ಸತ್ಯ ಸೇವೆ ಪ್ರೇಮ ಸ್ವಾರ್ಥತ್ಯಾಗ ದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಅವರ ಸ್ಮರಣೆ ನನ್ನ ಪಾಲಿಗೆ ಉದಯವಿದ್ದ ಹಾಗೆ. ಅವರು ನೀಡಿದ ಶಿಕ್ಷಣ ದಾಸೋಹ ಶತಶತಮಾನಗಳ ಆದರೂ ಈ ಭೂಮಿ ಮೇಲೆ ಬೆಳಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮರ್ಪಿತ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು. ಡಾಕ್ಟರ್ ಸುಜಾತಾ ಜಾಲಿ, ಡಾ. ಎಂಬಿ ಬೆಲ್ಲದ್ ಅವರನ್ನು ಗೌರವಿಸಿ ಸತ್ಕರಿಸಲಾಯಿತು.
ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ. ಸುನಿಲ್ ಜಲಾಲಪುರೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕೆಎಲ್ಇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಪ್ರಭಾಕರ್ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಜೀವ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಬೋಧಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆ ಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಶೀತಲ್ ನಂಜಪ್ಪನವರ ಅವರು ವಂದಿಸಿದರು. ಡಾ. ಅವಿನಾಶ್ ಕವಿ, ಡಾ. ಮಹೇಶ್ ಗುರನಗೌಡರ, ಡಾ. ನೇಹಾ ದಡೆದ, ಡಾ. ಆದಿತ್ಯ ಆಚಾರ್ ನಿರೂಪಿಸಿದರು.