ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಪುರಸಭೆಯಲ್ಲಿ ರಾಜಕೀಯ ಬೆಳವಣಿಗೆಯೊಂದು ಸಂಚಲನ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ನಾಲ್ಕು ಪುರಸಭೆ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಪುರಸಭೆಯಲ್ಲಿ ಅನುದಾನದ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಅಸಮಾಧಾನಗೊಂಡು, ಸಲೀಂಮಲಿಕ ಬೆಳವಡಿ, ಶ್ರೀಶೈಲ ನೇಗಿನಾಳ ಬಸವರಾಜ ದೊಡ್ಡಮನಿ ಕಾಶವ್ವ ಹನುಮಂತ್ ಹಿರೇಮೈತ್ರಿ ಸದಸ್ಯರು ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಅವರಿಗೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ರಾಜೀನಾಮೆ ಸಲ್ಲಿಸಿರುವ ವಿಚಾರವಾಗಲಿ, ಅದಕ್ಕೆ ನಿಖರ ಕಾರಣವೇನಾಗಿರಬಹುದು ಎಂಬುದಾಗಲಿ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ನಾಲ್ಕು ಸದಸ್ಯರು ನಿಜವಾಗಿಯೂ ರಾಜೀನಾಮೆ ಸಲ್ಲಿಸಿದ್ದಾರೆಯೇ? ರಾಜೀನಾಮೆ ನೀಡಿದ್ದರೆ ಅದರ ಹಿಂದಿನ ಪ್ರಮುಖ ಕಾರಣಗಳೇನು? ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಸಂಬಂಧಪಟ್ಟ ಸದಸ್ಯರು ಹಾಗೂ ಪುರಸಭೆ ಅಧಿಕಾರಿಗಳ ಅಧಿಕೃತ ಸ್ಪಷ್ಟನೆ ಹೊರಬಿದ್ದ ಬಳಿಕವಷ್ಟೇ ಈ ಬೆಳವಣಿಗೆಯ ಸಂಪೂರ್ಣ ಚಿತ್ರಣ ತಿಳಿದುಬರಲಿದೆ.
ಈ ಬೆಳವಣಿಗೆ ಮುನವಳ್ಳಿ ಪುರಸಭೆಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.
ಮುನವಳ್ಳಿ ಪುರಸಭೆಯ ನಾಲ್ಕು ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ ರಾಜೀನಾಮೆ ಅರ್ಜಿಗಳನ್ನು ಪರಿಶೀಲಿಸಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರವೀಣ ಜೈನ್, ಉಪವಿಭಾಗಾಧಿಕಾರಿಗಳು, ಬೈಲಹೊಂಗಲ.
ಮುನವಳ್ಳಿ ಪುರಸಭೆಯ ನಾಲ್ಕು ಸದಸ್ಯರು ರಾಜೀನಾಮೆ ನೀಡಿದ್ದಾರೆ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ ಕೂಡಲೇ ಆ ಸದಸ್ಯರನ್ನು ರಾಜೀನಾಮೆ ಅಂಗೀಕರಿಸಿ ನಾಲ್ಕು ವಾರ್ಡಗಳಿಗೆ ಚುನಾವಣೆ ಮಾಡಲಾಗುವು.
ಶಾಸಕ ವಿಶ್ವಾಸ್ ವೈದ್ಯ




