200 ವರ್ಷಗಳ ನಂತರ ಮೂರು ದಿವ್ಯ ಯೋಗಗಳು ; ಮೂರು ರಾಶಿಯವರು ಅದೃಷ್ಟವಂತರು
ಪ್ರತಿಯೊಂದು ಗ್ರಹಗಳು ನಿಯಮಿತ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಕೆಲವೊಮ್ಮೆ ಅವು ಇತರ ಗ್ರಹಗಳೊಂದಿಗೆ ಸೇರಿ ಶುಭ ಫಲಿತಾಂಶಗಳನ್ನು ನೀಡುತ್ತವೆ. ಇನ್ನೂ ಕೆಲ ಸಮಯದಲ್ಲಿ ಗ್ರಹಗಳು ಅಶುಭ ಫಲಿತಾಂಶಗಳನ್ನು ನೀಡಬಹುದು.
ಆ ರೀತಿಯಲ್ಲಿ ಇದೀಗ ಧರ್ಮಾಧಿಪತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಇದರಿಂದ ಕುಂಭದಲ್ಲಿ ಶಾಸರಾಜಯೋಗ ವೃದ್ಧಿಯಾಗಿದೆ. ಅಲ್ಲದೆ ಸಿಂಹ ರಾಶಿಯಲ್ಲಿ ಬುಧ ಶುಕ್ರರ ಸಂಯೋಗದಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. ಶುಕ್ರನ ಜೊತೆಗೆ ಶನಿ, ಬುಧ ಇರುತ್ತದೆ. ಹೀಗಾಗಿ ಈ 3 ಗ್ರಹಗಳ ಸಂಚಾರದಿಂದಾಗಿ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ.
ಹೀಗೆ ಏಕಕಾಲದಲ್ಲಿ ಮೂರು ರಾಜಯೋಗಗಳು ರೂಪಗೊಳ್ಳುತ್ತವೆ. ಈ ಮೂರು ದಿವ್ಯ ರಾಜಯೋಗಗಳು ಸುಮಾರು 200 ವರ್ಷಗಳ ನಂತರ ರೂಪಗೊಳ್ಳುತ್ತಿವೆ. ಈ ಮೂರು ರಾಶಿಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡು ಬಂದರೂ, ಮೂರು ರಾಶಿಯವರು ಈ ಯೋಗಗಳಿಂದ ಅದೃಷ್ಟವನ್ನು ಪಡೆಯುತ್ತಾರೆ. ಹಾಗಾದರೆ ಈ ರಾಜಯೋಗಗಳು ಯಾವ ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ ಎಂದು ತಿಳಿಯೋಣ.
ವೃಷಭ ರಾಶಿ
3 ದಿವ್ಯ ರಾಜಯೋಗಗಳಿಂದಾಗಿ ವೃಷಭ ರಾಶಿಯವರಿಗೆ ಅದ್ಭುತ ಫಲಿತಾಂಶ ಸಿಗಲಿದೆ. ಕೆಲಸ ಹಾಗೂ ವ್ಯವಹಾರದಲ್ಲಿ ಪ್ರಗತಿಯ ಅವಕಾಶವಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಜವಬ್ದಾರಿಗಳು ಬರಬಹುದು. ಹಣಕಾಸಿನ ಸ್ಥಿತಿ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ. ಬೇರೆ ರೀತಿಯಲ್ಲಿ ಧನಲಾಭ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಹಣದ ಹಲವಾರು ಮೂಲಗಳು ತೆರೆದುಕೊಳ್ಳುವ ಸಾಧ್ಯತೆಗಳು ಇವೆ. ಕೆಲವರಿಗೆ ಹೊಸ ಮನೆ ಹಾಗೂ ಕಾರು ಖರೀದಿ ಮಾಡುವ ಅವಕಾಶಗಳು ಸಿಗಲಿವೆ.
ಸಿಂಹ ರಾಶಿ
ಮೂರು ದಿವ್ಯ ಯೋಗಗಳಿಂದಾಗಿ ಸಿಂಹ ರಾಶಿಯವರಿಗೆ ಸಕಲ ಸೌಲತ್ತು ಸಿಗಲಿದೆ. ಬಹುಕಾಲದ ಆಸೆಗಳು ಈಡೇರುತ್ತವೆ. ಇದರಿಂದ ನಿಮ್ಮ ಮಾತು ಸುಧಾರಣೆಯಾಗಿ ಎಲ್ಲರನ್ನು ಆಕರ್ಷಿಸುವಂತೆ ನೀವು ಮಾತನಾಡುವಿರಿ. ಇದರಿಂದ ಅನೇಕ ವಿಷಯಗಳನ್ನು ಯಶಸ್ವಿಯಾಗಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀಡಿದ ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ. ಈ ಅವಧಿಯಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಆದಾಯದಲ್ಲೂ ಉತ್ತಮ ಏರಿಕೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ 3 ದಿವ್ಯ ರಾಜಯೋಗಗಳು ಉತ್ತಮ ಆರ್ಥಿಕ ಲಾಭವನ್ನು ನೀಡುತ್ತವೆ. ಪಿತ್ರಾರ್ಜಿತ ಆಸ್ತಿ ಧನಲಾಭವನ್ನು ನೀಡುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲು ಅವಕಾಶವಿರುತ್ತದೆ. ಸಮಾಜದಲ್ಲಿ ಹೆಸರು, ಕೀರ್ತಿ ಹೆಚ್ಚಾಗುವ ಸಾಧ್ಯತೆ ಇದೆ. ನೀವು ಷೇರು ಮಾರುಕಟ್ಟೆ, ಲಾಟರಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಅದರಿಂದ ಅಂದುಕೊಂಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ.