
Video : ಹರಕೆ ತೀರಿಸಲು ಹೋಗಿ ಕಲ್ಲು ಬಂಡೆಯಲ್ಲಿ ಸಿಲುಕಿದ ಮಹಿಳೆ : ಮುಂದೆನಾಯ್ತು…?

ವೈರಲ್ ವೀಡಿಯೋ : ನಮ್ಮ ದೇಶದಲ್ಲಿ ನಂಬಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಇದರಂತೆ ಕೆಲವೊಮ್ಮೆ ಜನರು ಅತಿಯಾದ ನಂಬಿಕೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯ.
ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಹಿಳೆಯೊಬ್ಬರು ದೇವರಿಗೆ ಹರಕೆ ತೀರಿಸಲು ಹೋಗಿ ಕಲ್ಲಿನ ಮಧ್ಯೆ ಸಿಲುಕಿದ್ದಾರೆ. ನಂತರ ವ್ಯಕ್ತಿ ಮಹಿಳೆ ಕಾಲು ಹಿಡಿದು ಹೊರಗೆ ಬರುವಂತೆ ಸಹಾಯ ಮಾಡಿದ್ದಾನೆ.
ಇನ್ನೂ ಮಹಿಳೆ ಮಧ್ಯಭಾಗ ಕಲ್ಲಿನ ಮಧ್ಯೆಯಿಂದ ಬಿಡಿಸಿಕೊಂಡು ಹೊರ ಬರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.