ತಿಗಡಿಯಲ್ಲಿ ವಿದ್ಯುತ್ ಟಿಸಿ ದುರಸ್ಥಿ ವೇಳೆಯಲ್ಲಿ ಲೈನ್ ಮ್ಯಾನ್ ಸಾವು
ಮೂಡಲಗಿ : ತಾಲೂಕಿನ ತಿಗಡಿ ಗ್ರಾಮದಲ್ಲಿನ ವಿದ್ಯುತ್ ಟ್ರಾನ್ಸಫರ್ಮರ್‌ನಲ್ಲಿ ದುರಸ್ಥಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿರು ಘಟನೆ ಗುರುವಾರ ಸಂಜೆ ಜರುಗಿದೆ.
ತಿಗಡಿ ಗ್ರಾಮದ ಹತ್ತಿರ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರನಲ್ಲಿ (ಟಿ.ಸಿ) ದುರಸ್ಥಿ ವೇಳೆಯಲ್ಲಿ ತಿಗಡಿ ಹೆಸ್ಕಾಂ ಶಾಖೆಯ ಸಿಬ್ಬಂದಿ ನಿಂಗಪ್ಪ ಕರಿಗೌಡರ್ (38) ಟ್ರಾನ್ಸಫಾರ್ಮರ್ ಮೇಲೆಯೇ ಸಾವನ್ನಪಿದು.
ಎಲ್ಲವನ್ನೂ ಸರಿಯಾಗಿ ಚಕ್ ಮಾಡಿಕೊಂಡೆ ಕೆಲಸ ಶುರು ಮಾಡಿದ್ದ ಲೈನ್ ಮ್ಯಾನ್, ಆದರೆ ಏಕಾಏಕಿ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪಿದು ಎಂದು ತಿಳಿದು ಬಂದಿದೆ .
ಘಟನಾ ಸ್ಥಳದಲ್ಲಿ ಮೃತ ನಿಂಗಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಮತ್ತು ಕುಲಗೋಡ ಪೊಲೀಸ್ ಠಾಣಾ ಅಧಿಕಾಗಳು ಭೆಟಿ ನೀಡಿದ್ದಾರೆ.